ಮೈಸೂರು, ಮಾರ್ಚ್ 09 (www.justkannada.in): ತಂತ್ರಜ್ಞಾನ ಕ್ಷೇತ್ರದಲ್ಲೂ ದಾಪುಗಾಲಿಡುತ್ತಿರುವ ಅರಮನೆ ನಗರಿ ಮೈಸೂರಿನಲ್ಲಿ ಪ್ರಪ್ರಥಮವಾಗಿ ಐಟಿ ಕಮ್ಯೂನಿಟಿ ‘ಮೈ ಡಾಟ್ ನೆಟ್’ ಸ್ಥಾಪನೆಯಾಗಿದೆ.

ಪರಂಪರೆ, ಸಾಂಸ್ಕೃತಿಕ ಇತಿಹಾಸದೊಂದಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಐಟಿ ಸಮುದಾಯವನ್ನು ಒಂದೆಡೆ ಸೇರಿಸುವುದು. ಈ ಮೂಲಕ ಯುವ ಸಮುದಾಯಕ್ಕೆ ಮಾರ್ಗದರ್ಶ ನೀಡುವುದು, ತಂತ್ರಜ್ಞಾನದ ಅಭಿವೃದ್ಧಿ ಕುರಿತು ಚರ್ಚೆ, ಸಂವಾದಗಳಿಗೆ ವೇದಿಕೆ ಒದಗಿಸುವುದು ‘ಮೈ ಡಾಟ್ ನೆಟ್’ ಉದ್ದೇಶವಾಗಿದೆ.

ಮೈಕ್ರೋಸಾಫ್ಟ್ ಸಂಬಂಧಿತ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾರ್ಗದರ್ಶನ, ಪರಸ್ಪರ ಹೊಸ ವಿಷಯಗಳನ್ನು ಹಂಚಿಕೊಳ್ಳಲು ಇಚ್ಛಿಸುವ ತಂತ್ರಜ್ಞಾನ ಕ್ಷೇತ್ರದ ಉತ್ಸಾಹಿಗಳಿಗೆ ಮಾರ್ಗದರ್ಶನ ನೀಡುವುದು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ‘ಮೈ ಡಾಟ್ ನೆಟ್’ ವೇದಿಕೆ ಕಲ್ಪಿಸಲಿದೆ.

 

ಮಾರ್ಚ್ 11 ಶನಿವಾರದಂದು ಉದ್ಘಾಟನೆ:

ಮೈ ಡಾಟ್ ನೆಟ್ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 11ರಂದು ಮೈಸೂರಿನ ಲೀ ರುಚಿ ದ ಪ್ರಿನ್ಸ್ ಹೋಟೆಲ್ ನಲ್ಲಿ ನಡೆಯಲಿದೆ. ಆಟೋಮೋಟಿವ್ ಆಕ್ಸಿಲ್ ಲಿ. ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್, ಮರ್ಲ್ಯಾಬ್ಸ್ ಸಾಫ್ಟ್ ವೇರ್ ಪ್ರೈ.ಲಿ. ಉಪಾಧ್ಯಕ್ಷ ಕೆ.ಸಿ.ಚನ್ನಕೇಶವ, ಎಲ್ ಆಂಡ್ ಟಿ ಗ್ರೂಪ್ ಡಿಲಿವರಿ ಹೆಡ್ ವಿ.ರವಿಕುಮಾರ್ ಇತರರು ‘ಮೈ ಡಾಟ್ ನೆಟ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.