ಸಿನಿಮಾ ಸಮಯದಲ್ಲಿ ನವೆಂಬರ್ 23 ರಂದು ಆ.ವೈ.ಜಾ.ಸ

0
2539

ಮೈಸೂರು:ನ-22:(www.justkannada.in)ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಆಯೋಜಿಸುವ ಸಿನಿಮಾ ಸಮಯದಲ್ಲಿ ನವೆಂಬರ್ 23 ರಂದು ಬುಧುವಾರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಡಾ.ಕೆ. ರಮೇಶ್ ಕಾಮತ್ ನಿರ್ದೇಶನದ ಆ.ವೈ.ಜಾ.ಸ. ಕೊಂಕಣಿ ಚಲನಚಿತ್ರ ಪ್ರದರ್ಶಿಸಲಾಗುವುದು.mysorefilm-societycinema-time

ಆವೈಜಾಸ ಕೊಂಕಣಿ ಭಾಷೆಯ ಮಕ್ಕಳ ಚಲನಚಿತ್ರ. ಆವೈಜಾಸ ಎಂದರೆ ಮಕ್ಕಳಲ್ಲಿ ಆಧ್ಯಾತ್ಮಿಕ ವೈಜ್ಞಾನಿಕ ಜಾತ್ಯಾತೀತ ಹಾಗೂ ಸಾಮಾಜಿಕ ಗುಣಗಳನ್ನು ಬೆಳೆಸುವುದಾಗಿದೆ. ಬೇರೆ ಬೇರೆ ಜಾತಿ, ಮತ, ಬಡತನ, ಶ್ರೀಮಂತ್ರಿಕೆ, ಹಿನಲ್ಲೆಯುಳ್ಳ ಮಕ್ಕಳು ನ್ಯಾಚರ್‍ಕ್ಯಾಂಪ್‍ನಲ್ಲಿ ಭಾಗವಹಿಸಿದಾಗ ಅಲ್ಲಿನ ಸತ್ಯಸ್ವಾಮಿಗಳು ಮಕ್ಕಳಲ್ಲಿ ಆವೈಜಾಸ ಗುಣಗಳನ್ನು ಜನಪದ ಕಲೆಗಳಾದ ಯಕ್ಷಗಾನ, ಗೊಂಬೆಯಾಟದ ಉಪಯೋಗಿಸಿಕೊಂಡು ಬೆಳೆಸುತ್ತಾರೆ. ಮಕ್ಕಳು ಸಮಾಜ ಸೇವೆಯ ಮೂಲಕ ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ. ಸಮಾಜದ ದುಷ್ಟ ಶಕ್ತಿಗಳಿಂದ ಸತ್ಯಸ್ವಾಮಿಗಳು ಮರಣ ಹೊಂದುತ್ತಾರೆ. ಮಕ್ಕಳು ಆವೈಜಾಸ ಮೂಲಕ ಹೋರಾಟ ನಡೆಸುತ್ತಾರೆ.

ಇದಕ್ಕೂ ಮುನ್ನ ಅಂದು ಸಂಜೆ 5-30ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.

Mysore,Film Society,Cinema Time