ಪ್ರಾಣಿಪ್ರಿಯರಿಗೊಂದು ಸಿಹಿಸುದ್ದಿ: ಮೈಸೂರು ಮೃಗಾಲಯಕ್ಕೆ ಚೆನ್ನೈ ನಿಂದ ನೂತನ ಅತಿಥಿಗಳ ಆಗಮನ…

0
603
Mysore Zoo- animal- new arrivals - Chennai

ಮೈಸೂರು,ಜೂ.19,2017(www.justkannada.in): ಮೈಸೂರು ಮೃಗಾಲಯಕ್ಕೆ ಮತ್ತೆ ನೂತನ ಅತಿಥಿಗಳ ಆಗಮನವಾಗಿದೆ. Mysore Zoo- animal- new arrivals - Chennai

ಪ್ರಾಣಿಗಳ ವಿನಿಮಯ ಯೋಜನೆಯಡಿ ಚೆನ್ನೈನ ಅರಿಗ್ನರ್ ಅಣ್ಣಾ ಜ್ಯೂಲಾಜಿಕಲ್ ಪಾರ್ಕ್ ನಿಂದ ಜೂನ್ 17ರಂದು ಕ್ಯಾಪ್ಚಿನ್ ಮಂಕಿ, ಸ್ವಾಂಪ್ ಡೀರ್ ,ಲೆಫರ್ಡ್ ಸೇರಿದಂತೆ ಹಲವು ಹೊಸ ಅತಿಥಿಗಳು ಆಗಮಿಸಿದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಲು ಅವಕಾಶ ಮಾಡಲಾಗುತ್ತದೆ.

ಕ್ಯಾಪ್ಚಿನ್ ಮಂಕಿ ಕಳೆದ ಏಪ್ರಿಲ್ 21 ರಂದು ಜನಿಸಿದೆ. ಹಾಗೆಯೇ ಸ್ವಾಂಪ್ ಡೀರ್,ಗೌರ್ ಕರುಗಳು ಮೇ ಮತ್ತು ಜೂನ್ ತಿಂಗಳಲ್ಲಿ ಜನಿಸಿವೆ ಎಂದು ಹೇಳಲಾಗುತ್ತಿದೆ.

ಕಳೆದೆರಡು ತಿಂಗಳ ಹಿಂದೆ ಹಕ್ಕಿ ಜ್ವರದ ಭೀತಿಯಿಂದ ಪ್ರವಾಸಿಗರು ಮೃಗಾಲಯಕ್ಕೆ ತೆರಳುವುದನ್ನು ನಿಲ್ಲಿಸಿದ್ದರು. ಒಂದು ತಿಂಗಳ ಕಾಲ ಮೃಗಾಲಯಕ್ಕೆ ನಿರ್ಬಂಧವನ್ನೂ ವಿಧಿಸಲಾಗಿತ್ತು. ಇದೀಗ ಹೊಸ ಅತಿಥಿಗಳ ಸೇರ್ಪಡೆ ಪ್ರಾಣಿಪ್ರಿಯರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

key words: Mysore Zoo- animal- new arrivals – Chennai