ಮೈಸೂರು, ಜೂ.19, 2017 : (www.justkannada.in news ) : ದಶಕಗಳ ಹಿಂದೆ ಬಾಲನಟನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿ ಬಳಿಕ ಕಿರಿಯ ವಯಸ್ಸಿನಲ್ಲೇ ಚಿತ್ರ ನಿರ್ದೇಶನ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಮಾಸ್ಟರ್ ಕಿಶನ್ ಈಗ ಮಿಸ್ಟರ್ ಕಿಶನ್.

ಮಾಸ್ಟರ್ ಹಂತ ದಾಟಿದ ಬಳಿಕ ಮಿಸ್ಟರ್ ಆಗುವ ಹಂತದವರೆಗೆ ಅನೇಕ ಪರಿವರ್ತನೆಗಳಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಕಿಶನ್ ತೆರೆಯಿಂದ ಮರೆಗೆ ಸರಿದಿದ್ದರು. ಇಂಥಿರ್ಪ ಕಿಶನ್ ಸೋಮವಾರ ಅರಮನೆ ನಗರಿ ಮೈಸೂರಿನಲ್ಲಿ ಸೋಮವಾರ ಪ್ರತ್ಯಕ್ಷರಾಗಿದ್ದರು. ಆಮೂಲಕ ಮಿಸ್ಟರ್ ಕಿಶನ್ ಈಗ ಹೇಗಿರಬಹುದು..? ಎಂಬ ಹಲವಾರ ಕುತೂಹಲಕ್ಕೆ ಕಡೆಗೂ ತೆರೆ ಎಳೆದರು.
ಹೌದು ಮೈಸೂರಿನಲ್ಲಿ ಇಂದು ಆಯೋಜಿಸಿದ್ದ ಯೋಗ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಕಿಶನ್ ಭಾಗವಹಿಸಿದ್ದರು. ಇದಕ್ಕೆ ಕಾರಣ ಕಿಶನ್ ತಾಯಿ. ವಿಶ್ವ ದಾಖಲೆಗೆ ಯತ್ನಿಸಿದ್ದ ಜಿಲ್ಲಾಡಳಿತದ ಪ್ರಯತ್ನಕ್ಕೆ ಪೂರಕವಾಗಿ ಆಕೆ ಗಿನ್ನಿಸ್ ಸಂಸ್ಥೆ ಜತೆಗೆ ಕೋ-ಅರ್ಡೀನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ದರಿಂದ ತಾಯಿಯ ಜತೆಗೆ ಕಿಶನ್ ಮೈಸೂರಿಗೆ ಆಗಮಿಸಿದ್ದರು.
ಮೈಸೂರು ಜಿಲ್ಲಾಧಿಕಾರಿ ರಂದೀಪ್, ಯೋಗ ದಾಖಲೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಕಿಶನ್ ತಾಯಿ ಜತೆ ಪತ್ರಿಕಾಗೋಷ್ಠಿ ಸ್ಥಳಕ್ಕೆ ಆಗಮಿಸಿದರು. ಯಾರೀ ಹ್ಯಾಂಡ್ ಸಮ್ ಎಂದು ಎಲ್ಲರ ಗಮನ ಆಶ್ಚರ್ಯದಿಂದ ಅತ್ತ ತಿರುಗಿತು. ಆಗ ಜಿಲ್ಲಾಧಿಕಾರಿಗಳೇ ಕಿಶನ್ ಅವರನ್ನು ಮಾಧ್ಯಮದವರಿಗೆ ಪರಿಚಯಿಸಬೇಕಾಯಿತು.
ಈ ವೇಳೆ ಮಾತನಾಡಿದ ಕಿಶನ್, ಯೋಗ ಹಾಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣ್ಣೆ ಸಿಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಿನ್ನಿಸ್ ದಾಖಲೆಗೆ ಮುಂದಾಗಿದೆ. ಇದೇ ಜೂ. 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ಹೊಸ ವಿಶ್ವ ದಾಖಲೆಗೆ ಮೈಸೂರು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದ ನಾಗರಿಕರು ಹಾಗೂ ವಿದ್ಯಾರ್ಥಿಗಳು ಈ ಯತ್ನಕ್ಕೆ ಕೈ ಜೋಡಿಸಿ ಉದ್ದೇಶ ಈಡೇರಿಸುವಂತೆ ಮನವಿ ಮಾಡಿಕೊಂಡರು.

key words : mysore-yoga-day-guineess-world-record-kishan-palace