ಪ್ರತಿಷ್ಠಿತ ಮೈಸೂರು ವಿವಿ ಕುಲಪತಿ ಸ್ಥಾನ ಈ ಬಾರಿ `ಅಹಿಂದ’ ವರ್ಗಕ್ಕೆ : ಪ್ರಬಲವಾಗಿ ಕೇಳಿ ಬರುತ್ತಿದೆ ಅಸಾದಿ – ಅಶೋಕ್ ಕುಮಾರ್ ಹೆಸರು…!

0
13

mysore-university-vice-chancelor-dalith-cm-media

ಮೈಸೂರು, ಜ.11, 2017 : (www.justkannada.in news ) : ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಿಂದ ಪ್ರೊ.ಕೆ.ಎಸ್.ರಂಗಪ್ಪ ನಿರ್ಗಮಿಸಿ ಬೆನ್ನಲ್ಲೇ ನೂತನ ಹುದ್ದೆಗೆ ಲಾಬಿ ಶುರುವಾಗಿದೆ. ಮೂಲಗಳ ಪ್ರಕಾರ `ಅಹಿಂದ’ ವರ್ಗಕ್ಕೆ ಈ ಬಾರಿ ಸ್ಥಾನ ಲಭಿಸಲಿದೆ.

ಈಗಾಗಲೇ ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಿಗೆ ಹೊಸ ಕುಲಪತಿ ಆಯ್ಕೆಗೊಳಿಸುವ ಸಂಬಂಧ ರಾಜ್ಯ ಸರಕಾರ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ನಾಳೆ (ಜ.12) ಕಡೆದಿನ. ಆದರೂ ಕುಲಪತಿ ಸ್ಥಾನದ ಆಕಾಂಕ್ಷಿಗಳು ತಿಂಗಳುಗಳಿಂದಲೇ ಹುದ್ದೆಗೆ ಲಾಬಿ ನಡೆಸುತ್ತಿರುವುದು ಗೌಪ್ಯವಾಗೇನು ಉಳಿದಿಲ್ಲ.

ಅಹಿಂದ ವರ್ಗಕ್ಕೆ :

ಮುಖ್ಯಮಂತ್ರಿ ಸಿದ್ದರಾಮಯ್ಯ `ಅಹಿಂದ’ ವರ್ಗದ ಪರವಾಗಿರುವ ಕಾರಣ, ಮೈಸೂರು ಹಾಗೂ ಬೆಂಗಳೂರು ವಿವಿ ಕುಲಪತಿ ಸ್ಥಾನ ಈ ವರ್ಗಕ್ಕೆ ಲಭಿಸಲಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಈಗಷ್ಟೆ ಹುದ್ದೆಯಿಂದ ನಿರ್ಗಮಿಸಿದ ಎರಡು ವಿವಿಗಳ ಕುಲಪತಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹಾಗಾಗಿ ಈ ಬಾರಿ ಅಹಿಂದ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಶುರುವಾಗಿದೆ.
ಆದರೆ ಮೈಸೂರು ವಿವಿಯಲ್ಲಿ ಕುಲಸಚಿವ ಹಾಗೂ ಪರೀಕ್ಷಾಂಗ ಕುಲಸಚಿವ ಹುದ್ದೆಯಲ್ಲಿರುವ ಇಬ್ಬರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಕುಲಪತಿ ಸ್ಥಾನವನ್ನು ಅಲ್ಪಸಂಖ್ಯಾತ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗೆ ಆಧ್ಯತೆ ನೀಡಬಹುದು ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಬೆಂಗಳೂರು ವಿವಿ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಅಶೋಕ್ ಕುಮಾರ್ ಹಾಗೂ ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಮುಜಾಫರ್ ಅಜಾದಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

www.justkannada.in/medical-scam-evalution-registrar-n.s.ashokkumar-in-the-dock
ಡಾ.ಅಶೋಕ್ ಕುಮಾರ್

ಈ ಇಬ್ಬರ ಪೈಕಿ ಪ್ರೊ.ಅಶೋಕ್ ಕುಮಾರ್ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಇವರ ಸಹೋದರ, ಸಿಂಡಿಕೇಟ್ ಮಾಜಿ ಸದಸ್ಯ ಗೋಪಿನಾಥ್ ಸಿಎಂ ಸಿದ್ದರಾಮಯ್ಯ ಅವರ ಆಪ್ತರು. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಜತೆಗೆ ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಕುಲಸಚಿವರಾಗಿ ಈ ಹಿಂದೆ ಹುದ್ದೆ ನಿರ್ವಹಿಸಿದ ಅನುಭವವಿದೆ.

 mysore-university-vice-chancelor-dalith-cm-media-muzaffar assadi-ashok-kumar
ಡಾ.ಮುಜಾಫರ್ ಅಸಾದಿ

ಮೃದು ಸ್ವಭಾವದ ಡಾ.ಮುಜಾಫರ್ ಅಸಾದಿ ಅವರು ಪ್ರಗತಿಪರರ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಾಧ್ಯಾಪಕರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿಪರರ ಬಗ್ಗೆ ವಿಶೇಷ ಒಲವು ಹೊಂದಿರುವುದು ಹಾಗೂ ಸಿಎಂ ಅವರ ಪತ್ರಿಕಾ ಸಲಹೆಗಾರರ ಪೈಕಿ ಒರ್ವರು ಡಾ. ಅಸಾದಿ ಅವರ ಪರವಾಗಿ ಲಾಬಿ ನಡೆಸುತ್ತಿರುವ ಮಾತು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇವರು ಸಹ ಕುಲಪತಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಎನ್ನಲಾಗಿದೆ.

 

 

ಶೋಧನ ಸಮಿತಿ :

ಮೈಸೂರು ವಿವಿ ಕುಲಪತಿ ಆಯ್ಕೆಗೆ ಸಂಬಂಧಿಸಿದಂತೆ ಈಗಾಗಲೇ ಶೋಧನಾ ಸಮಿತಿ (ಸರ್ಚ್ ಕಮಿಟಿ ) ರಚನೆಗೆ ಚಾಲನೆ ನೀಡಲಾಗಿದೆ. ಈ ಪೈಕಿ ಸರಕಾರ, ಮೈಸೂರು ವಿವಿ ಸಿಂಡಿಕೇಟ್ ಹಾಗೂ ಯುಜಿಸಿ ಪರವಾಗಿ ತಲಾ ಒಬ್ಬರಂತೆ ಸದಸ್ಯರ ನಾಮ ನಿರ್ದೇಶನ ಮಾಡಲಾಗಿದೆ. ಇನ್ನು ಸಮಿತಿಯ ಅಧ್ಯಕ್ಷರಾಗಲಿರುವ ರಾಜ್ಯಪಾಲರ ನಾಮ ನಿರ್ದೇಶಿತ ಒರ್ವ ಸದಸ್ಯರ ಆಯ್ಕೆಯಷ್ಟೆ ಬಾಕಿ ಉಳಿದಿದೆ.

 

key words : mysore-university-vice-chancelor-dalith-cm-media