ಮೈಸೂರು,ಮಾ,20,2017(www.justkannada.in): ಸಿಎಂ ಸಿದ್ದರಾಮಯ್ಯ ಅವರು ಹಿಟ್ಲರ್ ವರ್ತಿಸುತ್ತಿದ್ದು, ಅವರ  ಚೇಲಾಗಳಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂಧ್ಲಾಜೆ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ,ಕೆಲವು ಅಧಿಕಾರಿಗಳು ಸರ್ಕಾರಕ್ಕೆ ಸಹಾಯ ಮಾಡ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.ಆಯೋಗ ತಕ್ಷಣ ಸ್ಪಂದಿಸಬೇಕಿದೆ ಎಂದರು.

ಗುಂಡ್ಲುಪೇಟೆಯಲ್ಲಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಎಂ ಹಿಟ್ಲರ್ ರೀತಿ ವರ್ತಿಸುತಿದ್ದಾರೆ. ಪೊಲೀಸರು ಅವರ ಚೇಲಾಗಂತೆ ನಡೆದುಕೊಳ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹತಾಶೆ ಕಾಡುತಿದೆ.ಕಾಂಗ್ರೆಸ್ ಪಕ್ಷದವರು ಹತಾಶೆಯಿಂದ ಇದ್ದಾರೆ. ಬಿಜೆಪಿ ಜನ ಸೇರಿಸಿದ್ದಕ್ಕೆ ಬೆಚ್ಚಿ‌ಬಿದ್ದಿದ್ದಾರೆ. ಆ ಕಾರಣಕ್ಕೆ ಲಾಠಿ ಚಾರ್ಜ್ ಮಾಡಿ ಭಯಭೀತ ಮಾಡಿದ್ದಾರೆ. ಲಾಠಿಚಾರ್ಜ್ ಮಾಡಿದ ಎಸ್ ಐ ಹಾಗೂ ಇನ್ಸ್ ಪೆಕ್ಟರ್ ವಜಾ ಮಾಡುವಂತೆ ಆಗ್ರಹಿಸಿದರು.

Key words: mysore- shobha karndlaje- accused-police