ಸ್ವಾಮೀ ವಿವೇಕಾನಂದರ ಚಿಂತನೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಗೆ ಶರಣು.

0
8

mysore-police-suicide-vevekananda-babu-death-note
ಮೈಸೂರು, ಜ.11,2017 : (www.justkannada.in news) : ಜೆ.ಪಿ. ನಗರದ ನಿವಾಸಿ, 22 ವರ್ಷದ ಯುವಕ ಬಾಬು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತನಾಗಿದ್ದ ಮೃತ ಯುವಕ , ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದದ್ದು ಪತ್ತೆಯಾಗಿದೆ.
ಈ ದೇಹ ನಶ್ವರ, ವಿವೇಕಾನಂದರಂತೆ ನಾನು ನನ್ನ ದೇಹವನ್ನು ತ್ಯಜಿಸುತ್ತಿದ್ದೇನೆ. ಮರಣಾನಂತರ ಚಾಮುಂಡೇಶ್ವರಿ ದೇವಿಯ ತೀರ್ಥವನ್ನು ನನ್ನ ದೇಹಕ್ಕೆ ಪ್ರೋಕ್ಷಣೆ ಮಾಡಬೇಕು. ದೇಹಕ್ಕೆ ಕೇಸರಿ ಬಟ್ಟೆ ಹೊದಿಸಿ ಅಂತ್ಯಕ್ರಿಯೆ ನಡೆಸುವಂತೆ ಅಭಿಲಾಷೆ ವ್ಯಕ್ತಪಡಿಸಿದ್ದಾನೆ.

ದೇಹ ದಹಿಸಿದ ನಂತರ ಚಿತಾಭಸ್ಮವನ್ನು ಕನ್ಯಾಕುಮಾರಿಯಲ್ಲಿ ವಿಸರ್ಜಿಸುವಂತೆಯೂ ಸಹ ತನ್ನ ಡೆತ್ ನೋಟ್ ನಲ್ಲಿ ಕೋರಿಕೊಂಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು, ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

 

key words : mysore-police-suicide-vevekananda-babu-death-note