ಮೈಸೂರು,ಏ,20,2017(www.justkannada.in):  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅಸ್ವಸ್ಥರಾಗಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. Mysore- Minister  HC Mahadevappa – ill- Birthday -celebration

ಸಚಿವ ಹೆಚ್.ಸಿ ಮಹದೇವಪ್ಪ ತೀವ್ರ ಜ್ವರದಿಂದ ಬಳಲುತ್ತಿದ್ದಾರೆಂದು ಆಸ್ಪತ್ರೆ ಮೂಲಗಳ ಮಾಹಿತಿ ಲಭ್ಯವಾಗಿದೆ. ಅಸ್ವಸ್ಥರಾಗಿರುವ ಹೆಚ್ ಸಿ ಮಹದೇವಪ್ಪರನ್ನ ನೋಡಲು ಸಿಎಂ ಸಿದ್ದರಾಮಯ್ಯ ಸಂಜೆ  ಮೈಸೂರಿನ ಅಪೊಲೋ ಆಸ್ಪತ್ರೆಗೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಡಿಸಿ ರಂದೀಪ್ ಮಾಹಿತಿ  ನೀಡಿದ್ದಾರೆ.

ಆಸ್ಪತ್ರೆಯಲ್ಲೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಸಚಿವ ಮಹದೇವಪ್ಪ…..

ಅನಾರೋಗ್ಯ ಹಿನ್ನೆಲೆ ಹುಟ್ಟುಹಬ್ಬಕ್ಕೆ ಮಹದೇವಪ ಗೈರಾಗಿದ್ದು, ಮೂರು ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ  ಅಪೋಲೋ ಆಸ್ಪತ್ರೆಯಲ್ಲೇ ಸಚಿವ ಮಹದೇವಪ್ಪ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು.

Key words: Mysore- Minister  HC Mahadevappa – ill- Birthday -celebration