mysore-media-disitrict-association-srinivasa-prasad-bjp

ಮೈಸೂರು: ಇತ್ತೀಚೆಗೆ ನಡೆದ ನಂಜನಗೂಡು ಮರು ಚುನಾವಣೆಯಲ್ಲಿ ಪರಾಜಿತಗೊಂಡ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಅವರು ಮಾಧ್ಯಮದವರ ವಿರುದ್ಧ ಮಾಡಿರುವ ಟೀಕೆ ಸೋಲಿನ ಅತಾಶೆಯ ಉತ್ತುಂಗ ಸ್ಥಿತಿಯನ್ನು ತೋರ್ಪಡಿಸಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ದೀಪಕ್ ಹೇಳಿರುವುದಿಷ್ಟು…..

ನಿಮ್ಮ 4 ದಶಕಗಳ ರಾಜಕಾರಣದಲ್ಲಿ ಸೋಲು-ಗೆಲುವುಗಳನ್ನು ಕಂಡಿದ್ದೀರಿ. ಮೇಲಾಗಿ ಪ್ರಜಾಪ್ರಭುತ್ವವನ್ನು ಗೌರವಿಸುವುದಾಗಿ ಹೇಳುತ್ತೀರಿ. ದಲಿತ ಸಮುದಾಯದ ಧ್ವನಿಯಾಗಿದ್ದವರು ನೀವು. ನೀವು ನಡೆದು ಬಂದ ರಾಜಕೀಯ ಹಾದಿಯ ಬಗ್ಗೆ ಎಲ್ಲರಿಗೂ ಗೌರವವಿದೆ. ಕೇವಲ ಒಂದು ಸೋಲಿಗೆ ಈ ಪರಿಯ ಅತಾಶೆ ಮತ್ತು ವೈರಾಗ್ಯ ನಿಮ್ಮ ಹಿರಿತನಕ್ಕೆ ತಕ್ಕದಾದುದಲ್ಲ. ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ. ನೀವು ಜನರ ಮೇಲೆ ಭರವಸೆ ಇಟ್ಟು ಚುನಾವಣೆ ಎದುರಿಸಬೇಕೆ ವಿನಃ ಮಾಧ್ಯಮಗಳ ಮೇಲೆ ಅಲ್ಲ ಎಂದು ತಿಳಿಸಿದರು.

ಸ್ವಾಭಿಮಾನ ಎನ್ನುವುದು ಓರ್ವ ವ್ಯಕ್ತಿಯ ವೈಯಕ್ತಿಕ ನಡವಳಿಕೆ. ನಿಮ್ಮ ಈ ಸ್ವಾಭಿಮಾನ ಜನರ ಬಡತನ ನೀಗಿಸುವುದಿಲ್ಲ. ನಂಜನಗೂಡಿನ ಕೆರೆಗಳನ್ನು ತುಂಬಿಸುವುದಿಲ್ಲ. ಗುಡಿಸಲುಗಳಿಗೆ ಬೆಳಕು, ನೀರು ಕೊಡುವುದಿಲ್ಲ. ರಸ್ತೆಗಳು ರಿಪೇರಿ ಆಗುವುದಿಲ್ಲ. ದಲಿತರಿಗೆ ಭೂಮಿ ಸಿಗುವುದಿಲ್ಲ. ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ದೊರಕಿಸಿಕೊಡುವುದಿಲ್ಲ. ಬರದ ನಾಡಲ್ಲಿ ಮಳೆಯಾಗುವುದಿಲ್ಲ. ಮತದಾರರ ಸಂಕಷ್ಟಗಳು ನೀಗುವುದಿಲ್ಲ. ನಿರ್ಗತಿಕರಿಗೆ ಸೂರು ದೊರಕಿಸಿಕೊಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟ ದಿನದಿಂದ ಇಲ್ಲಿಯವರೆಗೂ ಮಾಧ್ಯಮದವರುನಿಮ್ಮ ಮನೆ ಮುಂದೆ ನಿಂತು ಸುದ್ದಿ ಮಾಡಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ಮಾಧ್ಯಮಗಳು ಎತ್ತಿ ಹಿಡಿದು ಸಹಾನುಭೂತಿ ತೋರಿಸಿವೆ. ಕಳೆದ ಮೂರು ತಿಂಗಳಿನಿಂದ ನಿಮ್ಮ ಸುದ್ದಿ ಬರೆಯದ ಪತ್ರಿಕೆಗಳಿಲ್ಲ, ಸುದ್ದಿ ಪ್ರಸಾರ ಮಾಡದ ಟಿವಿ ಮಾಧ್ಯಮಗಳಿಲ್ಲ. ಚುನಾವಣೆಯ ಸಂದರ್ಭದಲ್ಲಿ ಪತ್ರಕರ್ತರು ಊರೂರು ಸುತ್ತಿ ಸುದ್ದಿ ಮಾಡಿದ್ದಾರೆ. ಅದು ನಮ್ಮ ಕರ್ತವ್ಯ ಬಿಡಿ. ನಿಮ್ಮ ಪಕ್ಷದ ನಾಯಕರಿಗೆ ಪತ್ರಕರ್ತರ ಭವನ ವೇದಿಕೆ ಕೊಟ್ಟಿದೆ. ಇದೀಗ ನೀವು ಸೋತು ವಿರಾಮದಲ್ಲಿದ್ದೀರಿ. ಒಮ್ಮೆ ಮೂರ್ನಾಲ್ಕು ತಿಂಗಳ ಪತ್ರಿಕೆಗಳನ್ನು ತಿರುವಿ ಹಾಕಿ. ಮಾಧ್ಯಮದವರ ಬದ್ಧತೆ ನಿಮಗೆ ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.

ನೀವು ಅಧಿಕಾರದಲ್ಲಿದ್ದಾಗ ಹಗಲು-ರಾತ್ರಿ ನಿಮ್ಮ ಮನೆ ಬಾಗಿಲನ್ನು ಕಾಯುತ್ತಿದ್ದ ಪತ್ರಕರ್ತರು ಯಾರಾದರು ಇದ್ದಾರಾ ? ನೀವು ಮಂತ್ರಿಯಾಗಿದ್ದಾಗ ನಿಮ್ಮಿಂದ ವೈಯಕ್ತಿಕ ಲಾಭ ಮಾಡಿಕೊಂಡ ಮಾಧ್ಯಮದವರು ಇದ್ದಾರಾ ? ನಿಮ್ಮಿಂದ ಸೈಟು-ಜಮೀನು ಪಡೆದು, ವಗರ್ಾವಣೆ, ನಿಯೋಜನೆಗಳನ್ನು ಮಾಡಿಕೊಂಡು ಹಣ ಮಾಡಿದ ಪತ್ರಕರ್ತರಿದ್ದಾರಾ ? ಚುನಾವಣೆಯಲ್ಲಿ ನಿಮ್ಮಿಂದ ಹಣದ ಬೇಡಿಕೆ ಇಟ್ಟವರು ಇದ್ದಾರಾ ? ಸುದ್ದಿ ಪ್ರಸಾರಕ್ಕೆ ನಿಮ್ಮಿಂದ ಹಣ ನಿರೀಕ್ಷಿಸಿದ ಮಾಧ್ಯಮ ಸಂಸ್ಥೆ ಇದೆಯೇ ? ದಯವಿಟ್ಟು ಸಮಾಜಕ್ಕೆ ತಿಳಿಸಿ. ಅಂತವರು ಸಮಾಜದ ಮುಂದೆ ಬೆತ್ತಲಾಗಲಿ ಎಂದು ಸವಾಲು ಹಾಕಿದರು.

ನಿಮ್ಮ ಸೋಲಿಗೆ ಕಾರಣ ಏನು ?

ನೀವು ಅಧಿಕಾರದಲ್ಲಿದ್ದಾಗ ಸಮುದಾಯವನ್ನು ಕೈಬಿಟ್ಟಿದ್ದು, ಜನರಿಂದ ದೂರ ಉಳಿದಿದ್ದು, ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿದ್ದು, ನಿಮ್ಮ ಅಧಿಕಾರವನ್ನು ಮೂಲಭೂತವಾದಿಗಳ ಕೈಗೆ ಕೊಟ್ಟಿದ್ದು, ಕಷ್ಟ ಹೇಳಿಕೊಳ್ಳಲು ನಿಮ್ಮ ಮನೆಗೆ ಬಂದವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದು, ಕಂದಾಯ ಇಲಾಖೆಯನ್ನು ನಿಷ್ಕ್ರಿಯೆಗೊಳಿಸಿದ್ದು, ಮಂತ್ರಿಗಿರಿಯಿಂದ ಕೈಬಿಟ್ಟರೆಂಬ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೀವು ಪಕ್ಷಾಂತರ ನಿಧರ್ಾರ ಕೈಗೊಂಡಿದ್ದು, ದಲಿತರನ್ನು `ಟೇಕನ್ ಫಾರ್ ಗ್ರಾಂಟೆಡ್’ ಮಾಡಿಕೊಂಡಿದ್ದು, ನಿಮ್ಮ ಸ್ವಾಭಿಮಾನಕ್ಕೆ ಜನತೆ ಕೊಟ್ಟ ತೀರ್ಪನ್ನು ಅವಮಾನಿಸಿದ್ದು, ನಿಮ್ಮ ಹಿಂದೆ ಸದಾ ಇರುವ ಮೂರ್ನಾಲ್ಕು ಮಂದಿ ಫನಾನುಭವಿಗಳು ನಿಮ್ಮ ಸೋಲಿಗೆ ಕಾರಣವೇ ವಿನಃ, ಜನರಾಗಲಿ, ಮಾಧ್ಯಮದವರಾಗಲಿ ಅಲ್ಲ ಎಂದು ತಿಳಿಸಿದರು.

 

key words : mysore-media-disitrict-association-srinivasa-prasad-bjp