ಮೈಸೂರು, ನ.14, 2017 : (www.justkannada.in news) : ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು.
ವಿಷಯ ತಿಳಿಯುತ್ತಿದ್ದಂತೆ ನಕಲಿ ವೈದ್ಯ ರಾಜು ಪರಾರಿ. ಎಚ್.ಡಿ. ಕೋಟೆ ತಾಲೊಕು ಹಂಪಾಪುರದ ಕಾಳಿಹುಂಡಿಯಲ್ಲಿ ನಡೆದ ಘಟನೆ.

ಕಾಳಿಹುಂಡಿ ಗ್ರಾಮದ ಅಂಕುಷ (21)ಮೃತ ವಿದ್ಯಾರ್ಥಿನಿ. ಹಂಪಾಪುರದ ಕ್ಲೀನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಡಾ.ರಾಜು.
ಚುಚ್ಚು ಮದ್ದು ನೀಡಿದ್ದರು. ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ಸೋಂಕು ಉಂಟಾಗಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದ ಅಂಕುಷಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಅಂಕುಷ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಹಂಪಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

key words : mysore-h.d.kote-doctor-injection-girl-died-police