ಮೈಸೂರು ದಸರಾ ಮಹೋತ್ಸವ-2017: ಗಜ ಪಯಣಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ…

0
669
mysore-dasara-district-supervisory-minister-hc-mahadevappa-launched-gaja-payana

ಮೈಸೂರು,ಆ,12,2017(www.justkannada.in) ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಗಜಪಯಣಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಇಂದು ಚಾಲನೆ ನೀಡಿದರು.mysore-dasara-district-supervisory-minister-hc-mahadevappa-launched-gaja-payana

ಹುಣಸೂರಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಗಜಪಯಣಕ್ಕೆ ಸಚಿವ ಡಾ. ಎಚ್ ಸಿ ಮಹದೇವಪ್ಪ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಈ ವೇಳೆ ಮೇಯರ್ ರವಿಕುಮಾರ್, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ್, ಜಿ.ಪಂ ಸದಸ್ಯೆ ಪುಷ್ಪಾ ಅಮರನಾಥ್, ಮುಡಾ ಅಧ್ಯಕ್ಷ ಧ್ರುವಕುಮಾರ, ಜಿಲ್ಲಾಧಿಕಾರಿ ಡಿ.ರಂದೀಪ್‌ ಉಪಸ್ಥಿತರಿದ್ದರು. ಇಂದು ಆರಂಭವಾಗಿರುವ ಗಜ ಪಯಣ ಆಗಸ್ಟ್ 17ಕ್ಕೆ ಮೈಸೂರು ಅರಮನೆಗೆ ಬಂದು ತಲುಪಲಿವೆ.

ದಸರಾ ವೆಬ್ ಸೈಟ್ ಹಾಗೂ ಕಿರುಚಿತ್ರವೊಂದು ಬಿಡುಗಡೆಗೊಂಡಿದ್ದು, ಈ ಸಂದರ್ಭದಲ್ಲಿ ಮಾವುತರು ಹಾಗೂ ಕಾವಾಡಿಗಳಿಗೆ ಗಣ್ಯರು ತಾಂಬೂಲ ನೀಡಲಾಗಿದೆ. ಮೊದಲ ತಂಡದಲ್ಲಿ ಅರ್ಜುನ, ಬಲರಾಮ, ಭೀಮ, ಅಭಿಮನ್ಯು, ಗಜೇಂದ್ರ, ಕಾವೇರಿ ವರಲಕ್ಷ್ಮಿ, ವಿಜಯ ಆನೆಗಳು ಆಗಮಿಸಲಿವೆ.

key words:Mysore Dasara -, District Supervisory Minister-HC Mahadevappa- launched – Gaja payana