mysore-congress-leader-try-attack-waterman-knife

ಮೈಸೂರು,ಫೆಬ್ರವರಿ,12,2018(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ   ಕಾಂಗ್ರೆಸ್ ಮುಖಂಡ ಗೂಂಡಾಗಿರಿ ನಡೆಸಿದ್ದು, ನೀರು ಬಿಡುವ ವಿಚಾರದಲ್ಲಿ ವಾಟರ್ ಮನ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.mysore-congress-leader-try-attack-waterman-knife

ಬೆಲವತ್ತ ಶಿವಕುಮಾರ್  ಹಲ್ಲೆ ಮಾಡಿದ  ಕಾಂಗ್ರೆಸ್ ಮುಖಂಡ. ಚಾಕುವಿನಿಂದ ಹಲ್ಲೆಗೊಳಗಾದ ವಾಟರ್ ಮನ್ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೀರು ಬಿಡುವ ವಿಚಾರದಲ್ಲಿ ವಾಟರ್ ಮನ್ ಬೆಲವತ್ತ ಶಿವಕುಮಾರ್ ಜೊತೆ ಆಗಾಗ್ಗೆ  ತಗಾದೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ನಡುವೆ ಇಂದು ಬೆಳಿಗ್ಗೆ ಏಕಾಏಕಿ ಬೆಲವತ್ತ ಕುಮಾರ್ ವಾಟರ್ ಮನ್ ಗೆ  ಚಾಕುವಿನಿಂದ ಹಲ್ಲೆ ಮಾಡಿ, ಹೊಟ್ಟೆಗೆ ಇರಿಯಲು ಯತ್ನಿಸಿದ್ದಾನೆ. ಈ ವೇಳೆ ವಾಟರ್ ಮನ್ ಚಾಕು ತಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಬೆಲವತ್ತಕುಮಾರ್ ನನ್ನು  ಪೊಲೀಸರ ವಶಕ್ಕೆ ಪಡೆದಿದ್ದಾರೆ.

Key words:  Mysore-congress leader- Try – attack -waterman -knife.