ಮೈಸೂರು,ಫೆಬ್ರವರಿ,13,2018(www.justkannada.in): ಕಳೆದ ಬಾರಿ ಕೈತಪ್ಪಿದ್ದ ಸ್ವಚ್ಛ ನಗರಿ ಪಟ್ಟವನ್ನು ಮತ್ತೆ ಪಡೆದೇ ತೀರಲು ಮೈಸೂರಿನ ಪೌರ ಕಾರ್ಮಿಕರು  ರಸ್ತೆಯಲ್ಲೆ ಬೀಡು ಬಿಟ್ಟಿದ್ದಾರೆ. ಇಂದು ಮಹಾಶಿವರಾತ್ರಿ ಹಬ್ಬವಿದ್ದರೂ  ಸಹ ಹಬ್ಬದಿಂದ ದೂರ ಉಳಿದು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.mysore-civic-workers-cleanliness-maha-shivaratri-stayed-away-excitement

ಸತತವಾಗಿ ಎರಡು ಬಾರಿ ಸ್ವಚ್ಛ ನಗರ ಎಂಬ ಬಿರುದು ಪಡೆದು ಮೂರನೇ ಬಾರಿ ಸ್ವಲ್ಪದಲ್ಲಿ ತನ್ನ ಪಟ್ಟವನ್ನು ಬಿಟ್ಟುಕೊಟ್ಟಿದ್ದ ಮೈಸೂರಿಗೆ ಮತ್ತೆ ನಂಬರ್ ಒನ್  ಪಟ್ಟ ತಂದುಕೊಡಲು ಮೈಸೂರಿನ ಪೌರ ಕಾರ್ಮಿಕರ ತಂಡ ತೊಡೆತಟ್ಟಿ ನಿಂತಿದೆ.mysore-civic-workers-cleanliness-maha-shivaratri-stayed-away-excitement

ಇದಕ್ಕಾಗಿ ಇಷ್ಟು ದಿನ ಕೇವಲ ದಿನಕ್ಕೆ ಒಂದು ಬಾರಿ ತಮ್ಮ ಪಾಳಿಯ ಕೆಲಸ ಮಾಡಿ ಮೈಸೂರನ್ನು ಸ್ವಚ್ಛಾಗಿ ಇಡಲು ಶ್ರಮ ಪಡುತ್ತಿದ್ದ ಪೌರ ಕಾರ್ಮಿಕರು, ನಿನ್ನೇ ಯಿಂದ ಮೈಸೂರಿನಲ್ಲಿ ಬೀಡು ಬಿಟ್ಟಿರುವ ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ತಂಡಕ್ಕೆ ಮೈಸೂರಿನ ಸ್ವಚ್ಛತೆ ಬಗ್ಗೆ ಗಮನ ಸೆಳೆಯಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.mysore-civic-workers-cleanliness-maha-shivaratri-stayed-away-excitement

ಇಂದು ದೇಶದಾದ್ಯಂತ ಹಿಂದುಗಳು ಮಹಾ ಶಿವರಾತ್ರಿ ಸಂದರ್ಭದಲ್ಲಿ ಶಿವನ ಆರಾಧನೆ ಮಾಡುತ್ತಾ. ಶಿವನ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರೆ. ಮೈಸೂರಿನ ಪೌರ ಕಾರ್ಮಿಕರು ನಮಗೆ ಹಬ್ಬ ಹರಿದಿನಗಳ ಬದಲಿಗೆ ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ಬರಬೇಕೆಂದು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಈಗಾಗಲೇ ಮೈಸೂರಿಗೆ ಆಗಮಿಸಿದ ಸ್ವಚ್ಚ ಸರ್ವೇಕ್ಷಣಾ ತಂಡಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ವಚ್ಚ ನಗರಿ ಪಟ್ಟ ಪಡೆಯಲು ೧೪೦೦ಗಳ ಅವಶ್ಯಕತೆ ಇದ್ದು ಇದಕ್ಕೆ ಸ್ವಚ್ಛತಾ ಆಪ್ ಡೌನ್‌ಲೋಡ್ ಗೆ ೪೦೦ ಅಂಕ ದೊರೆಯುತ್ತದೆ. ಇಷ್ಟು ಅಂಕ ಗಳಿಸಲು ೧೭ ಸಾವಿರ ಆಫ್ ಗಳು ಡೌನ್‌ಲೋಡ್ ಅವಶ್ಯಕತೆ ಇತ್ತು. ಆದರೆ ಮೈಸೂರಿನ ಸಾರ್ವಜನಿಕರು ೨೮ ಸಾವಿರ ಆಫ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಭರ್ಜರಿ ಒಪನಿಂಗ್ ನೀಡಿದ್ದಾರೆ. ಇನ್ನು ಬೇಕಿರುವ ೧೦೦೦ ಅಂಕಗಳು ಜನರು ಫೀಡ್ ಬ್ಯಾಕ್ ಮತ್ತು ಪ್ರತಿಕ್ರಿಯೆಗಳ ಮೇಲೆ ನಿಂತಿದೆ..

ಒಟ್ಟಾರೆ ಹೇಳುವುದಾದರೆ  ನಗರಾಡಳಿತ ಮತ್ತು ಪೌರ ಕಾರ್ಮಿಕರು ನಡೆಸುತ್ತಿರುವ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರಕಲಿ. ಎಂಬುದು ನಮ್ಮೆಲ್ಲರ ಆಶಯ..

 

Key words: Mysore- civic workers- cleanliness- Maha Shivaratri -stayed away- excitement.