ಮೈಸೂರು ಚಾಮುಂಡೇಶ್ವರಿ ದೇವಾಲಯದ ಹುಂಡಿ ಮೇಲೆ ಮಂಗಳಾರತಿ ತಟ್ಟೆ ಇಟ್ಟು ಕಾಣಿಕೆ ಹಣ ಜೇಬಿಗಿಳಿಸುತ್ತಿದ್ದ ಪರಿಚಾರಕ ವಜಾ…

0
195
Mysore Chamundeshwari temple -Mangalaratti plate -money laundering -priest-dismissed.

ಮೈಸೂರು,ಜನವರಿ,12,2018(www.justkannada.in): ಮೈಸೂರು ಚಾಮುಂಡೇಶ್ವರಿ ಬೆಟ್ಟದಲ್ಲಿ ಅರ್ಚಕರ ಕರಾಮತ್ತು ಮುಂದುವರೆದಿದ್ದು,ದೇವಾಲಯದ ಹುಂಡಿ ಮೇಲೆ ಮಂಗಳಾರತಿ ತಟ್ಟೆ ಇಟ್ಟು ಕಾಣಿಕೆ ಹಣ ಜೇಬಿಗಿಳಿಸುತ್ತಿದ್ದ ಪರಿಚಾರಕನನ್ನು ವಜಾ ಮಾಡಲಾಗಿದೆ.Mysore Chamundeshwari temple -Mangalaratti plate -money laundering -priest-dismissed.

ದೇವಾಲಯಕ್ಕೆ ಭಕ್ತರು ಕಾಣಿಕೆ ನೀಡಿದ್ರೆ , ಅದು ಸರ್ಕಾರಿ ಹುಂಡಿಗೆ ಬೀಳುವ ಬದಲು ಪರಿಚಾರಕರ ಆರತಿ ತಟ್ಟೆ ಸೇರ್ತಿತ್ತು.ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿ ಬಳಿ ತಟ್ಟಿ ಇಟ್ಟಿದ್ದ ಪರಿಚಾರಕನ ಕೃತ್ಯ ದೇವಾಲಯದ ಸಿ ಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಎರಡೆರಡು ತಟ್ಟೆ ಹಿಡಿದು ಭಕ್ತರಿಗೆ ಕಿರಿ ಕಿರಿ ಮಾಡೋದು ನಿಷಿದ್ಧ. ಆದರೆ ಹುಂಡಿಗೆ ಭಕ್ತರು ಕಾಣಿಕೆ ಹಾಕಲು ಬಂದಾಗ ಹುಂಡಿ ಬಳಿ ಮಂಗಳಾರತಿ ತಟ್ಟೆ ಇಟ್ಟು ಕಾಣಿಕೆ ಹಣ ಜೇಬಿಗಿಳಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಪರಿಚಾರಕನನ್ನು ವಜಾ ಮಾಡಿ ಜಿಲ್ಲಾಧಿಕಾರಿ ಡಿ ರಂದೀಪ್ ಅವರಿಂದ ಖಡಕ್ ಸೂಚನೆ ನೀಡಿದ್ದಾರೆ.

key words: Mysore Chamundeshwari temple -Mangalaratti plate -money laundering -priest-dismissed.