ಸಿದ್ದು ಬಜೆಟ್ ಗೆ ಜೈಹೋ ಎಂದ ಸ್ಯಾಂಡಲ್ ವುಡ್ ಮಂದಿ…..

0
961
mysore- budget- Sandalwood –mandya ramesh-meena tugadeep

ಮೈಸೂರು,ಮಾ,15,2017(www.justkannada.in): ಕನ್ನಡ ಚಲನಚಿತ್ರ ರಂಗದ ಅಭಿವೃದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಕುರಿತಂತೆ ಚಿತ್ರರಂಗದ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಜೆಟ್ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

mysore- budget- Sandalwood –mandya ramesh-meena tugadeepಚಿತ್ರ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಜಸ್ಟ್ ಕನ್ನಡ ಡಾಟ್ ಇನ್ ಜೊತೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಚಿತ್ರರಂಗದ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿದೆ ಎಂದರು. ಅದರಲ್ಲೂ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯಗೊಳಿಸಿರುವುದು ನಿಜಕ್ಕೂ ಸಮಯೋಚಿತವಾದ ತಿರ್ಮಾನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಚಿತ್ರದ ಟಿಕೆಟ್ ದರವನ್ನ ಗರಿಷ್ಠ 200 ರೂ ನಿಗದಿಗೊಳಿಸಿರುವುದು ಸ್ವಾಗತಾರ್ಹ. ಇದರಿಂದ ಚಿತ್ರಪ್ರೇಮಿಗಳನ್ನ ಸುಲಿಗೆ ಮಾಡುವುದು ತಪ್ಪಿದಂತಾಗುತ್ತದೆ. ಇದಕ್ಕಾಗಿ ಕರ್ನಾಟಕ ಸರ್ಕರಕ್ಕೆ ದೊಡ್ಡ ಧನ್ಯವಾದಗಳು ಎಂದರು.

mysore- budget- Sandalwood –mandya ramesh-meena tugadeepನಟ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಸಾರಿನ ಬಜೆಟ್ ನಿಜಕ್ಕೂ ಆಶಾದಾಯಕ. ಅದರಲ್ಲೂ ಮೈಸೂರು ಸಮೀಪ ಚಿತ್ರನಗರಿ ನಿರ್ಮಾಣ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳ ನಾಟಕಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬಜೆಟ್ ನಲ್ಲೆ 3 ಕೋಟಿಗಳ ಅನುದಾನ ನಿಗದಿಪಡಿಸಿರುವುದು ಅತ್ಯಂತ ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದರು.

mysore- budget- Sandalwood –mandya ramesh-meena tugadeepಚಿತ್ರ ನಿರ್ಮಾಪಕಿ ಮೀನಾತೂಗುದೀಪ  ಮಾತನಾಡಿ, ಮೈಸೂರು ಸಮೀಪ ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವರ್ಷಗಳಿಂದ ಆಶ್ವಾಸನೆ ಕೇಳುತ್ತಲೆ ಬಂದಿದ್ದವು. ಈಬಾರಿ ಅದು ಬಜೆಟ್ ನಲ್ಲಿ ಘೋಷಣೆಯಾಗಿದೆ. ಇದು ಅನುಷ್ಟಾನಕ್ಕೆ ಬಂದಲ್ಲಿ ನಿಜಕ್ಕೂ ಚಿತ್ರರಂಗದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಪ್ರದರ್ಶನ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಟಿಕೆಟ್ ದರ 200 ರೂ ಬದಲು ಮತ್ತಷ್ಟು ಕಡಿಮೆ ಇರಬೇಕಿತ್ತು ಎಂದರು.

mysore- budget- Sandalwood –mandya ramesh-meena tugadeepಬಜೆಟ್ ಕುರಿತಂತೆ ಪ್ರತಿಕ್ರಿಯಿಸಿದ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್, ಇದೇನು ಆಶಾದಾಯಕ ಬಜೆಟ್ ಅಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಮಧ್ಯಾಹ್ನ 1.30 ಹಾಗೂ ಸಂಜೆ 4.30ರ ಪ್ರದರ್ಶನ ಕಡ್ಡಾಯ ವ್ಯಾಪ್ತಿಗೆ ಒಳಪಟ್ಟಿರುವುದು ಅಷ್ಟೇನು ಸಹಕಾರಿಯಾಗದು. ಕಾರಣ ಮಲ್ಟಿಪ್ಲೆಕ್ಸ್ ಗಳಲ್ಲಿ ಸಂಜೆ ಹಾಗೂ ರಾತ್ರಿ ಪ್ರದರ್ಶನಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಎಂದರು. ಅದೇ ರೀತಿ ಮಲ್ಟಿಪ್ಲೆಕ್ಸ್ ಗಳಲ್ಲಿ ದರವನ್ನ 200ರೂಗೆ ನಿಗದಿಪಡಿಸಿರುವುದು ಸಹ ದುಬಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

mysore- budget- Sandalwood –mandya ramesh-meena tugadeep
ಸದಭಿರುಚಿಚಿತ್ರಗಳ ನಿರ್ದೇಶಕ ರತ್ನಜ ಮಾತನಾಡಿ  ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯಗೊಳಿಸಿರುವುದು ನಿಜಕ್ಕೂ ಸಂತಸ ತಂದಿದೆ. ಆದರೆ ಟಿಕೆಟ್ ದರ 200ರೂ ನಿಗದಿಪಡಿಸಿರುವುದು ದುಬಾರಿಯಾಗಿದೆ. ನೆರೆಯ ತಮಿಳುನಾಡು ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ವಾರದ 7 ದಿನವೂ, ಯಾವುದೇ ಭಾಷೆಯ ಚಿತ್ರವಾದರೂ ದರ ಮಾತ್ರ 120ರೂಪಾಯಿಗಳು. ಹಾಗಾಗಿ ಆ ರಾಜ್ಯದಲ್ಲಿ ಮಧ್ಯಮವರ್ಗದ ಜನರೂ ಸಹ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವ ಅವಕಾಶ ಪಡೆದಿದ್ದಾರೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ದರವನ್ನ ಇನ್ನಷ್ಟು ಕಡಿತಗೊಳಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟರು.

Key words:mysore- budget- Sandalwood –mandya ramesh-meena tugadeep