ಮೈಸೂರು ದಸರಾ ಅಂಗವಾಗಿ ಪುಸ್ತಕ ಪ್ರೇಮಿಗಳಿಗೆ ತೆರದಿದೆ ಪುಸ್ತಕ ಮೇಳ….

0
324
mysore- Book Fair -book lovers - open

ಮೈಸೂರು,ಸೆ,21,2017(www.justkannada.in): ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಧಿಕಾರ ನಗರದ ಕಾಡಾ ಕಚೇರಿ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕ್ರತಿ ಸಚಿವರಾದ  ಉಮಾಶ್ರೀ ಅವರು ಉದ್ಘಾಟಿಸಿದರು.mysore- Book Fair -book lovers - open

ಸಚಿವರು ಪ್ರತಿಯೊಂದು ಮಳಿಗೆಗಳಿಗೆ ಭೇಟಿ ನೀಡಿ‌ ಪುಸ್ತಕಗಳನ್ನು ಕುತೂಹಲದಿಂದ ವೀಕ್ಷಿಸಿದರು. ಹಾಗೂ ಸಚಿವರು ಖ್ಯಾತ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರು ಸಂಪಾದಿಸಿರುವ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಪುಸ್ತಕವನ್ನು ರೂ 800/- ಕೊಟ್ಟು ಖರೀದಿ ಮಾಡಿದರು.

ನಂತರ ಸಚಿವೆ ಉಮಾಶ್ರೀ ಮಾತನಾಡಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪುಸ್ತಕಗಳನ್ನು ಹೊರತರುವ ಮೂಲಕ ಹಾಗೂ ತಾಂತ್ರಿಕವಾಗಿ ಸಿದ್ದಪಡಿಸಿರುವ “ಕಣಜ” ಅಗಾದ ವಿಷಯವಸ್ತುವನ್ನು ಜನತೆಗೆ ಒದಗಿಸಿದೆ. ಮೊಬೈಲ್ ಆಪ್ ನ ಮೂಲಕ ಕೂಡ ಓದಲು ಲಭ್ಯವಿದೆ ಎಂದು ತಿಳಿಸಿದರು ನಂತರ ಲೇಖಕಿ ಕವಿತಾ ರೈ ಅವರ  ” ಕಥನ ರಾಜಕಾರಣ” ಮತ್ತು ” ನಾಟಿ ಓಟ- ಕೊಡಗಿನ ಕಥೆಗಳು” ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರ ಭೂಪತಿ ಅವರು ಮಾತನಾಡಿ ಮೇಳ ದಲ್ಲಿ ಮೊದಲ ಬಾರಿ ರಚನಾತ್ಮಕ ಚಟುವಟಿಕೆಗಳಾದ ಕವಿಗೋಷ್ಠಿ, ವಿಚಾರ ಸಂಕಿರಣ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೆಶಕರಾದ ಎನ್.ಆರ್. ವಿಶುಕುಮಾರ್, ಪ್ರಧಿಕಾರದ ಅಧ್ಯಕ್ಷರಾದ ಡಾ.ವಸುಂಧರ ಭೂಪತಿ ಹಾಗೂ ಲೇಖಕಿ ಕವಿತಾ ರೈ ಅವರು‌ ಉಪಸ್ಥಿತರಿದ್ದರು.

ಪುಸ್ತಕ ಮೇಳದಲ್ಲಿ 51 ಪುಸ್ತಕ ಮಳಿಗೆಗಳು ಇದ್ದು, ಏಳು ಸರ್ಕಾರದ ಅಂಗ ಸಂಸ್ಥೆ ಗಳು, ಕರ್ನಾಟಕ ಜನಪದ ವಿಶ್ವವಿದ್ಯಾಲಯವು ಪುಸ್ತಕ ಮಳಿಗೆ ತೆರದಿದೆ. ಮುದೋಳ, ಶಿರಸಿ, ಬಂಟ್ವಾಳ, ಮೈಸೂರು ಮತ್ತು ಬೆಂಗಳೂರಿನ ಪ್ರಕಾಶಕರು ಭಾಗವಹಿಸಿದ್ದಾರೆ.

ಪುಸ್ತಕ ಮೇಳ ಬೆಳಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೂ ತೆರೆದಿರುತ್ತದೆ. ಪುಸ್ತಕ ಪ್ರೇಮಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

Key words:mysore- Book Fair -book lovers – open