ನಟ ಓಂಪುರಿ ಅಕಾಲಿಕ ನಿಧನದ ಹಿನ್ನೆಲೆ, ಸಚಿವೆ ಉಮಾಶ್ರೀ ಅವರಿಗೆ ಮೈಸೂರು ರಂಗಾಯಣದ ` ಬಹುರೂಪಿ ನಾಟಕೋತ್ಸವ ‘ ಉದ್ಘಾಟನೆ ಜವಾಬ್ದಾರಿ..!

0
287
mysore-bahuroopi-drama-fest-ompuri-umashri-kannada

 mysore-bahuroopi-drama-fest-ompuri-umashri-kannada

ಮೈಸೂರು, ಜ.06, 2016 : ನಟ ಓಂಪುರಿ ನಿಧನದಿಂದ ` ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಉದ್ಘಾಟನೆ ಜವಾಬ್ದಾರಿ, ಹಿರಿಯ ಕಲಾವಿದೆಯೂ ಆಗಿರುವ ಸಚಿವೆ ಉಮಾಶ್ರೀ ಅವರದ್ದಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ನಿಧನರಾದ ಹಿರಿಯ ನಟ ಓಂಪುರಿ, ಮುಂದಿನ ವಾರ ಮೈಸೂರಿಗೆ ಆಗಮಿಸಿ ರಂಗಾಯಣದಲ್ಲಿ ನಡೆಯುವ ಅಂತರರಾಷ್ಟ್ರೀಯ ಬಹುಭಾಷಾ ನಾಟಕೋತ್ಸ `ಬಹುರೂಪಿ’ ಯನ್ನು ಉದ್ಘಾಟಿಸಬೇಕಿತ್ತು. ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು. ಇಂದು ಮುಂಜಾನೆ ನಟ ಓಂಪುರಿ ಹೃದಯಘಾತದಿಂದ ಹಠಾತ್ ನಿಧನರಾದರು.

ಈ ಸುದ್ಧಿ ನಟ ಓಂಪುರಿ ಆಗಮನಕ್ಕೆ ಕಾದಿದ್ದ ಮೈಸೂರಿನ ರಂಗಾಸಕ್ತರಲ್ಲಿ ತೀವ್ರ ಬೇಸರ ಮೂಡಿಸಿದೆ. ಪ್ರತಿಭಾವಂತ ಹಿರಿಯ ನಟನ ಜತೆ ಬಹುರೂಪಿ ನಾಟಕೋತ್ಸವ ನೋಡುವ ಅವಕಾಶದಿಂದ ವಂಚಿತರಾಗುವಂತಾಗಿದೆ. ಜ.13 ರಿಂದ ಆರಂಭವಾಗಲಿರುವ ಬಹುರೂಪಿ ನಾಟಕೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಬರುವುದಾಗಿ ನಟ ಒಂಪುರಿ ಕಳೆದ ತಿಂಗಳಿನಲ್ಲೇ ರಂಗಾಯಣದ ಅಧಿಕಾರಿಗಳಿಗೆ ಸಮ್ಮತಿ ಸೂಚಿಸಿದ್ದರು. ಈ ಸಲುವಾಗಿಯೇ ಆಹ್ವಾನ ಪತ್ರಿಕೆ ಸಹ ಮುದ್ರಣಗೊಂಡಿತ್ತು.

 mysore-bahuroopi-drama-fest-ompuri-umashri-kannada

ಆದರೆ ಹಿರಿಯ ಕಲಾವಿದ ಓಂಪುರಿ ನಿಧನದಿಂದ ಬಹುರೂಪಿ ಉದ್ಘಾಟನೆಗೆ ಹೊಸ ಅತಿಥಿಯನ್ನು ಆಯ್ಕೆ ಮಾಡಲು ಮೈಸೂರು ರಂಗಾಯಣ ಅಧಿಕಾರಿ ವರ್ಗ ಶುಕ್ರವಾರ ವಿಶೇಷ ಸಭೆ ನಡೆಸಿತು. ಈ ಸಭೆಯಲ್ಲಿ ಹಿರಿಯ ಕಲಾವಿದೆ ಹಾಗೂ ಸಚಿವೆ ಉಮಾಶ್ರೀ ಅವರನ್ನು ಉದ್ಘಾಟಕರನ್ನು ಆಯ್ಕೆ ಮಾಡಲಾಯಿತು ಎಂದು ರಂಗಾಯಣದ ಮೂಲಗಳು ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿವೆ.

 

 

 
key words : mysore-bahuroopi-drama-fest-ompuri-umashri-kannada