ಮೈಸೂರಿನಲ್ಲಿ  ವ್ಯಕ್ತಿಯ ಬರ್ಬರ ಹತ್ಯೆ: ತಮ್ಮ ಮನೆಯ ಬಳಿಯೇ ಶವವಾಗಿ ಪತ್ತೆ…

0
1686

ಮೈಸೂರು,ಅ,12,2017(www.justkannada.in):  ವ್ಯಕ್ತಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.murder-person-mysore-detecting-herself-near-her-home

ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಸಲಾಪುರ ಗ್ರಾಮದಲ್ಲಿ ಈ  ಘಟನೆ ನಡೆದಿದೆ. ರಾತ್ರಿ ಮನೆಯಿಂದ ಹೊರಹೋದ ವ್ಯಕ್ತಿ ಬೆಳಗ್ಗೆ ಅರೆನಗ್ನ ಶವವಾಗಿ ಪತ್ತೆಯಾಗಿದ್ದಾನೆ. ವೆಂಕಟೇಶ್ (30) ಕೊಲೆಯಾದ ವ್ಯಕ್ತಿ. ಇವರು ಕಂಪಲಾಪುರದ ತಂಬಾಕು ಬೋರ್ಡ್  ನಲ್ಲಿ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದರು. ಇಂದು ಮುಂಜಾನೆ ಅವರ ತಂದೆ ಕಸ ಸುರಿಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ವೆಂಕಟೇಶ್ ತಮ್ಮ ಮನೆಯ ಬಳಿಯೇ ಶವವಾಗಿ ಪತ್ತೆಯಾಗಿದ್ದು, ಯಾರು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ೀ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: murder –person- Mysore- Detecting -herself –near- her home.