ಅತೀ ಹೆಚ್ಚು ಬೋಲ್ಡ್: ಟಿ-20ಯಲ್ಲಿ ಆಸಿಸ್ ವಿರುದ್ಧ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ ಬೌಲರ್’ಗಳು

0
2781

ಗುವಾಹಟಿ, ಅಕ್ಟೋಬರ್ 08 (www.justkannada.in):  ಟಿ-20 ಪಂದ್ಯವೊಂದರಲ್ಲಿ ಅತಿಹೆಚ್ಚು ಬೌಲ್ಡ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಬೌಲರ್ ಗಳು ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್ ಗಳು ಬೌಲ್ಡ್ ಮೂಲಕವೇ ಆಸೀಸ್ ತಂಡದ 6 ವಿಕೆಟ್ ಗಳನ್ನು ಉರುಳಿಸಿದರು.

ಟೀಂ ಇಂಡಿಯಾಗ ವೇಗಿ ಜಸ್ ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್ ಇನ್ನು ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ತಲಾ 1 ಬೌಲ್ಡ್ ಔಟ್ ಮಾಡಿದ್ದಾರೆ. ಟಿ20 ಪಂದ್ಯವೊಂದರಲ್ಲಿ ಈ ಹಿಂದೆ ಇನ್ನು ನಾಲ್ಕು ರಾಷ್ಟ್ರಗಳ ಬೌಲರ್ ಗಳು 6 ಬೌಲ್ಡ್ ಔಟ್ ಮಾಡಿದ ದಾಖಲೆ ಹೊಂದಿದ್ದರು.