ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ವೇಗದ ಬೌಲರ್ ಮುಹಮ್ಮದ್ ಇರ್ಫಾನ್ ಅಮಾನತು

0
1569

ಲಾಹೋರ್:ಮಾ-14:(www.justkannada.in) ಪಾಕಿಸ್ತಾನ ಸೂಪರ್ ಲೀಗ್‌‌ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಆರೋಪ ಹಿನ್ನಲೆಯಲ್ಲಿ ವೇಗದ ಬೌಲರ್ ಮುಹಮ್ಮದ್ ಇರ್ಫಾನ್ ರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ಇರ್ಫಾನ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿ ಪಿಸಿಬಿ ಆದೇಶಿಸಿದೆ. ಪಿಎಸ್‌ಎಲ್‌ ಟೂರ್ನಿಯಲ್ಲಿ ಇರ್ಫಾನ್‌ ಕ್ರಿಕೆಟ್ ಬುಕ್ಕಿ ಜೊತೆ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಇರ್ಪಾನ್‌ರನ್ನು ಪಿಸಿಬಿ ವಿಚಾರಣೆಗೊಳಪಡಿಸಿತ್ತು. ಆಗ ಬುಕ್ಕಿಯೋರ್ವ ಇರ್ಫಾನ್‌ರನ್ನು ಸಂಪರ್ಕಿಸಿದ್ದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಇರ್ಫಾನ್‌ರನ್ನು ಅಮಾನತು ಮಾಡಲಾಗಿದೆ. ಅಮಾನತು ಅವಧಿಯಲ್ಲಿ ಇರ್ಫಾನ್ ಯಾವುದೇ ಕ್ರಿಕೆಟ್‌ ಪಂದ್ಯದಲ್ಲಿ ಆಡುವಂತಿಲ್ಲ. ಈ ಕುರಿತು 14 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಪಿಸಿಬಿ ಇರ್ಫಾನ್‌ಗೆ ಸೂಚಿಸಿದೆ.

Mohammad Irfan suspended by Pakistan Cricket Board for PSL