ಬೆಂಗಳೂರು,ಜ,12,2017(www.justkannada.in): ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ  ಬಿಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು,  ಈಶ್ವರಪ್ಪ ಅವರನ್ನ ವಿಧಾನ ಪರಿಷತ್ ವಿಪಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ  ಎದ್ದು ಕಾಣುತ್ತಿದೆ.   MLc- meeting –bs yaddiyurappa-Coke- KS eshwarappa

ಅಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಿದ್ದತೆ ಬಗ್ಗೆ ಚರ್ಚಿಸಲು ಬಿಎಸ್ ಯಡಿಯೂರಪ್ಪ ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಪರಿಷತ್ ಸದಸ್ಯರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಎಂಎಲ್ ಸಿಗಳು ಭಾಗವಹಿಸುವಂತೆ ಬಿಎಸ್ ವೈ ಸೂಚಸಿದ್ದು, ಆದರೆ ಈ ಸಭೆಗೆ ಪರಿಷತ್ ನಾಯಕರಾಗಿರುವ ಕೆಎಸ್ ಈಶ್ವರಪ್ಪಗೆ ಮಾತ್ರ ಅಹ್ವಾನ ನೀಡಿಲ್ಲ.( ಬಿಜೆಪಿಯಲ್ಲಿ ಪರಿಷತ್ ಸಭಾಪತಿ ಡಿಹೆಚ್ ಶಂಕರಮೂರ್ತಿ ಸೇರಿದಂತೆ ಒಟ್ಟು 25 ಸದಸ್ಯರಿದ್ದಾರೆ)

ಹೀಗಾಗಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಸಮಾವೇಶ ನಡೆಸುತ್ತಿರುವ ಕೆಎಸ್ ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ನಡುವೆ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ವಿಧಾನ ಪರಿಷತ್ ಸ್ಥಾನದಿಂದ ಕೆಎಸ್ ಈಶ್ವರಪ್ಪಗೆ ಕೋಕ್ ನೀಡಲು ಬಿಎಸ್ ವೈ ಮುಂದಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇತ್ತೀಚಿಗಷ್ಟೆ ರಾಜ್ಯ ಬರ ಪ್ರವಾಸ ಕೈಗೊಳ್ಳಲು ಮೂರು ತಂಡಗಳನ್ನ ರಚಿಸಿದ್ದ ಬಿಎಸ್ ಯಡಿಯೂರಪ್ಪ ತಂಡದಲ್ಲಿ ಕೆಎಸ್ ಈಶ್ವರಪ್ಪ ಗೆ ಸ್ಥಾನ ನೀಡಿರಲಿಲ್ಲ. ಇದೀಗ ಎಂಎಲ್ ಸಿಗಳ ಸಭೆಯಲ್ಲಿ ಕೆಎಸ್ ಈಶ್ವರಪ್ಪಗೆ ಅಹ್ವಾನ ನೀಡಿಲ್ಲದಿರುವುದು ಕೆಎಸ್ ಈಶ್ವರಪ್ಪರನ್ನ ಪಕ್ಷದಿಂದ ದೂರವಿರಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Key words: MLc- meeting –bs yaddiyurappa-Coke- KS eshwarappa