ಬೆಂಗಳೂರು,ಏ,21,2017(www.justkannada.in): ನಂಜನಗೂಡಿನ ನೂತನ ಶಾಸಕರಾಗಿ ಕಳಲೆ ಕೇಶವಮೂರ್ತಿ ಹಾಗೂ ಗುಂಡ್ಲುಪೇಟೆ ನೂತನ ಶಾಸಕಿಯಾಗಿ ಗೀತಾಮಹದೇವ್ ಪ್ರಸಾದ್ ಅವರು ಇಂದು ದೇವರ ಹೆಸರಿನಲ್ಲಿ  ಪ್ರಮಾಣ ವಚನ ಸ್ವೀಕರಿಸಿದರು. MLA- Keshale Keshavmurthy –MLA- Gita Mahadev Prasad- received -oath

ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸ್ಪೀಕರ್ ಕೋಳಿವಾಡ  ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕರಾಗಿ ಕಳಲೆ ಕೇಶವಮೂರ್ತಿ ಶ್ರೀಕಂಠೇಶ್ವರ ದೇವರ ಹೆಸರಿನಲ್ಲಿ ಹಾಗೂ  ಗೀತಾ ಮಹದೇವ್ ಪ್ರಸಾದ್ ಅವರು ಮಲೆಮಹದೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ ಬಾರಿ ನಡೆದ  ಉಪಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಕಳಲೇ ಕೇಶವಮೂರ್ತಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದಿಂದ ಗೀತಾಮಹದೇವ್ ಪ್ರಸಾದ್ ಗೆಲವು ಸಾಧಿಸಿದ್ದರು. ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲವು ಸಾಧಿಸಿದೆ

Key words: MLA- Keshale Keshavmurthy –MLA- Gita Mahadev Prasad- received -oath