ಬೆಂಗಳೂರು,ಮಾ,20,2017(www.justkannada.in): ಮಿಸ್ ಕಾಲ್ ಯಡವಟ್ಟಿನಿಂದಾಗಿ ಮಹಿಳೆಯೊಬ್ಬರಿಗೆ ನಿರಂತರ ರಾತ್ರಿ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.

22 ವರ್ಷದ ಶ್ರೀಮಂತ್ ಬಂಧಿತ ಆರೋಪಿ. ಒಂದು ವಾರದ ಹಿಂದೆ ಘಟನೆ ನಡೆದಿರುವುದು. ಶ್ರೀಮಂತ್ ನನ್ನ ಪೀಣ್ಯಾಠಾಣಾ ಪೊಲೀಸರು ಬಂಧಿಸಿದ್ದಾರೆ.

ಘಟನೆ ಏನು……

ಮಹಿಳೆಯೊಬ್ಬರು ತನ್ನ ಸ್ನೇಹಿತೆಗೆ ಕಾಲ್ ಮಾಡಿಲು ಹೋಗಿ ತಪ್ಪು ನಂಬರ್ ಗೆ ಡಯಲ್ ಮಾಡಿದ್ದಾರೆ. ಈ ವೇಳೆ ಆರೋಪಿ ಶ್ರೀಮಂತ್ ಮೊಬೈಲ್ ಗೆ ಮಿಸ್ ಕಾಲ್ ಹೋಗಿದ್ದು, ನಂತರ ಶ್ರೀಮಂತ್ ವಾಪಸ್ ಮಹಿಳೆಗೆ ಕರೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ರಾಂಗ್ ನಂಬರ್ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಆರೋಪಿ ಶ್ರೀಮಂತ್ ದಿನನಿತ್ಯ ರಾತ್ರಿ ಮಹಿಳೆಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ, ಅಲ್ಲದೆ ಆತ ಮಹಿಳೆ ಬಳಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟಿದ್ದನು ಎಂದು ಹೇಳಲಾಗುತ್ತಿದ್ದು, ಇದರಿಂದ ಬೇಸತ್ತ ಮಹಿಳೆ ಈ ವಿಚಾರವನ್ನ ತನ್ನ ಪತಿಗೆ ತಿಳಿಸಿದ್ದಾರೆ.

ತದನಂತರ ದಂಪತಿ ಪ್ಲಾನ್ ಮಾಡಿ ಆರೋಪಿ ಶ್ರೀಮಂತ್ ನನ್ನ ಅಲ್ಲಿನ ಸಮೀಪ 8ನೇ ಮೈಲಿಗೆ ಬರಲು ಹೇಳಿದ್ದಾರೆ.ಇದರಿಂದ ಮಹಿಳೆ ಒಪ್ಪಿದ್ದಾಳೆ ಎಂದು ಖುಷಿಯಿಂದ ಆರೋಪಿ ಅಲ್ಲಿಗೆ ಬಂದಿದ್ದು, ಆತನನ್ನ ಹಿಡಿದು ದಂಪತಿಗಳು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Miss Call – phone –police- harassed –youngboy- woman