ನಂಜನಗೂಡಿನಿಂದ ಸಚಿವ ಹೆಚ್.ಸಿ ಮಹದೇವಪ್ಪ ಸ್ಪರ್ಧಿಸುವಂತೆ ‘ಕೈ’ ಕಾರ್ಯಕರ್ತರಿಂದ ಆಗ್ರಹ…

0
148

ಮೈಸೂರು,ಜನವರಿ,12,2018(www.justkannada.in):  ನಿನ್ನೆಯಷ್ಟೆ ಮುಂದಿನ ಚುನಾವಣೆಗೆ ನಂಜನಗೂಡಿನ ಅಭ್ಯರ್ಥಿ ಕಳಲೇ ಕೇಶವಮೂರ್ತಿ ಅವರನ್ನು ಗೆಲ್ಲಿಸಿ ಎಂದು ಘೋಷಣೆ ಮಾಡಿದ್ದ ಬೆನ್ನಲ್ಲೆ ಇದೀಗ ಭಿನ್ನರಾಗವೇರ್ಪಟ್ಟಿದೆ. ನಂಜನಗೂಡಿನಿಂದ ಸಚಿವ ಹೆಚ್.ಸಿ ಮಹದೇವಪ್ಪ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಜೆಡಿಎಸ್ ನಲ್ಲಿದ್ದ ಕಳಲೇ ಕೇಶವಮೂರ್ತಿ ಕಾಂಗ್ರೆಸ್  ಸೇರ್ಪಡೆಗೊಂಡು ನಂಜನಗೂರು ಉಪಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ನಡುವೆ ಮುಂದಿನ ಭಾರಿಯು ಇವರನ್ನೇ ನಂಜನಗೂಡು ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಇದಕ್ಕೆ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವ ಹೆಚ್.ಸಿ ಮಹದೇವಪ್ಪ ನಂಜನಗೂಡಿನಿಂದ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಇನ್ನು ಸಚಿವ ಹೆಚ್.ಸಿ ಮಹದೇವಪ್ಪ ಸಿವಿ ರಾಮನ್ ನಗರದಿಂದ ಸ್ಪರ್ಧಿಸಲಿದ್ದಾರೆಂಬ ವಿಚಾರ ತಿಳಿದು ಬಂದಿದೆ.

ಉಪಚುನಾವಣೆ ವೇಳೆ  ಕಳಲೆ ಕೇಶವಮೂರ್ತಿ ಅವರನ್ನು ಗೆಲ್ಲಿಸಿ ಮುಂದಿನ ಬಾರಿ ನಾನೇ ಸ್ಪರ್ಧಿಸುತ್ತೇನೆ  ಎಂದು ಹೆಚ್.ಸಿ  ಮಹದೇವಪ್ಪ ಅವರು ಭರವಸೆ ನೀಡಿದ್ದರು ಹೀಗಾಗಿ ಅವರೇ ಸ್ಪರ್ಧಿಸಲಿ ಎಂದು ಕೈ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

Key words: Minister HC Mahadevappa –contest- Nanjangud- demanded -congress activists