ಸಚಿವ ಹೆಚ್.ಸಿ ಮಹದೇವಪ್ಪ ಕಾರು ಅಪಘಾತ: ಅಪಾಯದಿಂದ ಪಾರು: ಕಾರು ಜಖಂ…

0
612
minister-hc-mahadevappa-car-accident-escape-danger-car-collision

ಮೈಸೂರು,ಸೆ.21,2017(www.justkannada.in): ಮೈಸೂರು  ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ಕಾರು  ಅಪಘಾತವಾದ ಘಟನೆ ಇಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.minister-hc-mahadevappa-car-accident-escape-danger-car-collision

ಹೆಚ್.ಡಿ.ಕೋಟೆ ತಾಲೂಕಿನ ಸಿಂದೊಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಭರ್ತಿಯಾಗಿದ್ದ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಬಾಗೀನ ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಪಾಲ್ಕೊಂಡಿದ್ದರು. ಬಾಗಿನ ಅರ್ಪಿಸಿ ವಾಪಸ್ಸಾಗುವಾಗ ಸಿಂದೊಳ್ಳಿ ಗ್ರಾಮದ  ಬಳಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹಾಗೂ ಶಾಸಕ  ಎಂ.ಕೆ.ಸೋಮಶೇಖರ್ ಅವರ ಕಾರುಗಳ ನಡುವೆ ಡಿಕ್ಕಿ  ಸಂಭವಿಸಿದೆ ಎನ್ನಲಾಗುತ್ತಿದೆ.

ಇನ್ನು ಘಟನೆಯಿಂದ ಸಚಿವ ಮಹದೇವಪ್ಪ ಅವರ ಕಾರು ಜಖಂ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಸಚಿವ ಹೆಚ್.ಸಿ ಮಹದೇವಪ್ಪ ಅವರ ಅಪ್ತಸಹಾಯಕರೊಬ್ಬರೇ  ಕಾರಿನಲ್ಲಿ ಕುಳಿತಿದ್ದರು. ಸಚಿವ ಮಹದೇವಪ್ಪ ಅವರು ಸಿಎಂ ಕಾರಿನಲ್ಲಿ ತೆರಳಿದ್ದರು ಎಂಬ ಮಾಹಿತಿ ಸುದ್ದಿ ಮಾಧ್ಯಮದಿಂದ ತಿಳಿದು ಬಂದಿದೆ.

Key words: Minister HC Mahadevappa- car accident- Escape – danger- Car collision.