ಕಲುಷಿತ ನೀರಿನಿಂದ ಲಕ್ಷಾಂತರ ಮೌಲ್ಯದ ಮೀನುಗಳು ಸಾವು: ದುರ್ವಾಸನೆಯಿಂದ ಆರೋಗ್ಯಕ್ಕೆ ತೊಂದರೆಯಾಗುವ ಆತಂಕದಲ್ಲಿ ಜನರು….

0
163
Millions -fishes -die -contaminated water-raichur

ರಾಯಚೂರು,ಡಿ,7,2017(www.justkannada.in): ಕಲುಷಿತ ನೀರು ಮತ್ತು ಆಮ್ಲಜನಕ ತೊಂದರೆಯಿಂದಾಗಿ ಲಕ್ಷಾಂತರ ಮೌಲ್ಯದ ಮೀನುಗಳು ಸಾವನಪ್ಪಿದ್ದು, ಇದರ ದುರ್ವಾಸನೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಆತಂಕ ಜನರಲ್ಲಿ ಮನೆಮಾಡಿದೆ.

ರಾಯಚೂರು ತಾಲ್ಲೂಕಿನ ಮರ್ಚೇಡ್ ಗ್ರಾಮದ ಕೆರೆಯಲ್ಲಿ ಪ್ರಸಕ್ತ ಸಾಲಿನಲ್ಲಿ 12 ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಡಲಾಗಿತ್ತು. ನಗರದ ಚರಂಡಿ ನೀರು ಕೆರೆಗೆ ಹರಿದು ಬರುತ್ತಿದ್ದು ಆಮ್ಲಜನಕ ತೊಂದರೆಯಿಂದ ಸಾವನಪ್ಪಿವೆ ಎಂದು ಕೆರೆಯ ಸಂಘದ ಸದಸ್ಯರು ತಿಳಿಸಿದ್ದಾರೆ.

ಮೀನುಗಾರ ಇಲಾಖೆ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯ ನೀರನ್ನು ಪರೀಕ್ಷೆಗಾಗಿ ಕೃಷಿ. ವಿ.ವಿ.ಗೆ ನೀಡಲಾಗಿದೆ. ಇತ್ತೀಚೆಗೆ ಸಾಕಷ್ಟು ಮಳೆಯಾಗಿದ್ದು ಹೆಚ್ಚಾಗಿ ಕಲುಷಿತ ನೀರು ಹರಿದು ಮೀನುಗಳು ಸಾವನಪ್ಪಿವೆ ಎಂದು ಕೆರೆಯ ಸಂಘದ ಸದಸ್ಯರು ತಿಳಿದ್ದಾರೆ.

ಕೆರೆ ಹತ್ತಿರ ರಸ್ತೆ ಇದ್ದು ಜನರು ಸಂಚರಿಸಲು  ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾಗುತ್ತಿದ್ದಂತೆ ಸತ್ತಮೀನಿನ ದುರ್ವಾಸನೆ ಗ್ರಾಮದಲ್ಲಿ ಹಬ್ಬುತ್ತಿದ್ದು, ಇದರಿಂದಾಗಿ ಜನರ ಆರೋಗ್ಯಕ್ಕೆ ತೊಂದರೆಯಾಗುವ ಸಂಭವ ಹೆಚ್ಚಾಗಿದೆ. ಮೀನುಗಾರ ಇಲಾಖೆ ಮತ್ತು ಜಿಲ್ಲಾಡಳಿತ ಗಮನ ಹರಿಸಿ ಕ್ರಮವಹಿಸಬೇಕಾಗಿದೆ.

Key words: Millions -fishes -die -contaminated water-raichur