ಬೆಂಗಳೂರು,ಮಾ,20,2017(www.justkannada.in): ಧರ್ಮ ಜಾತಿ ಮಧ್ಯೆ ಸರ್ಕಾರದಿಂದ ವಿಷದ ಬೀಜ ಬಿತ್ತಲಾಗುತ್ತಿದೆ. ಬಜೆಟ್ ನಲ್ಲೂ  ರೈತರ ಮಧ್ಯೆ ಭೇದ ಭಾವ ಮಾಡಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಜಗದೀಶ್ ಶೆಟ್ಟರ್, ಸರ್ಕಾರದಲ್ಲಿ ಜಿಲೇಬಿ ಮತ್ತು ನಾನ್ ಜಿಲೇಬಿ  ಎಂದು ಪೈಲ್ ಗಳಿಗೆ ಹೆಸರಿಡಲಾಗಿದೆ.  ಜಿಲೇಬಿ ಎನ್ನುವ ಫೈಲ್ ಯಾವುದೇ ಕಾರಣಕ್ಕೂ ಕ್ಲಿಯರ್ ಆಗಲ್ಲ. ನಾನ್ ಜಿಲೇಬಿ ಫೈಲ್ ತಕ್ಷಣ ಕ್ಲಿಯರ್ ಆಗುತ್ತೆ. ಜಿಲೇಬಿ ಫೈಲ್ ಅಂದ್ರೆ ಗೌಡ,ಲಿಂಗಾಯಿತ ಬ್ರಾಹ್ಮಣ. ಈ ಮೂಲಕ ಸರ್ಕಾರ ಭೇದ ಭಾವ ಮಾಡುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ಬಜೆಟ್ ನಲ್ಲೂ  ರೈತರ ಮಧ್ಯೆ ಭೇದ ಭಾವ ಮಾಡಿದ್ದೀರಾ? ಅಲ್ಪ ಸಂಖ್ಯಾತರೆಂದು   ಘೋಷಿಸಿದ್ದೀರಾ? ಯೋಜನೆ ಘೋಷಿಸುವುದಾದರೇ  ಎಲ್ಲಾ ಸಮುದಾಯಕ್ಕೂ ಘೋಷಿಸಿ. ಮೊದಲು ವೊಟ್ ಬ್ಯಾಂಕ್ ಮಾಡುವುದನ್ನ ಬಿಡಿ. ಉತ್ತರ ಪ್ರದೇಶದಲ್ಲಿ ವೋಟ್ ಬ್ಯಾಂಕ್ ಮಾಡಿ ಕಾಂಗ್ರೆಸ್ ನೆಲಕಚ್ಚಿದೆ.  ಶೇ20ರಷ್ಟು ಅಲ್ಪಸಂಖ್ಯಾತರು ಬಿಜೆಪಿಗೆ ವೋಟ್ ಮಾಡಿದ್ದಾರೆ ಎಂದು ಶೆಟ್ಟರ್ ಹೇಳಿದರು.

Key words: meantime – Government – religion- caste – seed- Jagadish Shettar