ನವದೆಹಲಿ:ಮಾ-20:(www.justkannada.in) ಮೆಕ್‌ ಡೊನಾಲ್ಡ್ಸ್ ಆ್ಯಪ್ ಮೂಲಕ ಫಾಸ್ಟ್ ಫೂಡ್ ಆರ್ಡರ್ ಮಾಡಲು ಮುಂದಾಗಿರುವ ಗ್ರಾಹಕರಿಗೆ ಇಲ್ಲೊಂದು ಶಾಕಿಂಗ್ ಸುದ್ದಿಯಿದೆ. ಇಂಡಿಯಾದ ಮೊಬೈಲ್‌ ಆ್ಯಪ್‌ ‘ಮೆಕ್‌ ಡೆಲಿವರಿ’ಯಿಂದ 20 ಲಕ್ಷಕ್ಕೂ ಹೆಚ್ಚು ಗ್ರಾಹಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ಸೈಬರ್‌ ಭದ್ರತಾ ಸಂಸ್ಥೆ ಫ್ಯಾಲಿಬಲ್‌ ತಿಳಿಸಿದೆ.

ಹೆಸರು, ಇ-ಮೇಲ್‌ ವಿಳಾಸ, ದೂರವಾಣಿ ಸಂಖ್ಯೆ, ಮನೆ ಅಥವಾ ಕಚೇರಿ ವಿಳಾಸ, ಸಾಮಾಜಿಕ ಜಾಲತಾಣಗಳ ಲಿಂಕ್‌ಗಳು ಇವೆ. ಹ್ಯಾಕರ್ ಗಳು ಗ್ರಾಹಕರ ಈ ಮಾಹಿತಿಗಳನ್ನು ಬಳಸಿಕೊಂಡು ಅವರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇ-ವ್ಯಾಲೆಟ್ ಸೇರಿದಂತೆ ಹಣಕಾಸು ವಿವರಗಳನ್ನು ಕಲೆಹಾಕಲು ಉಪಯೋಗಿಸಿಕೊಂಡಿದ್ದಾರೆ ಎಂದು ಸೈಬರ್ ಸೆಕ್ಯೂರಿಟಿ ಘಟಕ ತಿಳಿಸಿದೆ.

ಮೆಕ್‌ ಡೊನಾಲ್ಡ್ಸ್ ಈ ಅಚಾತುರ್ಯವನ್ನು ಮನಗಂಡು ಕೂಡಲೇ ಸರಿಪಡಿಸಿರುವುದಾಗಿ ಹೇಳಿದೆ. ಮೆಕ್‌ ಡೊನಾಲ್ಡ್ಸ್ (ವೆಸ್ಟ್‌ ಆ್ಯಂಡ್‌ ಸೌತ್‌ ಮತ್ತು ನಾರ್ತ್‌ ಆ್ಯಂಡ್‌ ಈಸ್ಟ್‌ ) ಎಂದು ವಹಿವಾಟು ನಡೆಸುತ್ತಿದೆ. ನಾರ್ತ್‌ ಆ್ಯಂಡ್‌ ಈಸ್ಟ್‌ನ ಬಳಕೆದಾರರು ಬೇರೆಯೇ ಆ್ಯಪ್‌ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಆ ಪ್ರದೇಶದ ಬಳಕೆ ದಾರರ ಮಾಹಿತಿಗೆ ಧಕ್ಕೆಯಾಗಿಲ್ಲ ಎಂದು ಹೇಳಲಾಗಿದೆ.
McDonalds,mobile app,leaks,users information