ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್’ನಲ್ಲಿ ಕಂಚು ಗೆದ್ದ ಮಂಜು ಕುಮಾರಿ

0
2463

ನವದೆಹಲಿ, ಆಗಸ್ಟ್ 04 (www.justkannada.in): ಫಿನ್ ಲ್ಯಾಂಡ್ ನ ತಂಪೆರೆಯಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಂಜು ಕುಮಾರಿ ಅವರು ಉಕ್ರೇನ್ ನ ಇಲೋನ ಪ್ರೊಕೊಪೆವಿನಿಕ್ ಅವರನ್ನು 2-0 ಅಂತರದಿಂದ ಮಣಿಸುವ ಮೂಲಕ ಕಂಚು ಖಚಿತಪಡಿಸಿಕೊಂಡಿದ್ದಾರೆ.

ಗುರುವಾರ ನಡೆದ 59 ಕೆಜಿ ವಿಭಾಗದಲ್ಲಿ ಬಲ್ಗೇರಿಯಾದ ಅಲೆಕ್ಸಾಂಡ್ರಿಯನ್ ನಿಕೊಲಾವೀ ಕಾಶಿನೋವಾ ಅವರ 5-1 ಅಂಕಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಕ್ರೀಡಾಕೂಟದ ಪ್ರಮುಖ ಸುತ್ತಿಗೆ ಪದಾರ್ಪಣೆ ಮಾಡಿದ್ದರು.

ಈ ಮಧ್ಯೆ 44 ಕೆಜಿ ವಿಭಾಗದಲ್ಲಿ ದಿವ್ಯಾ ತೋಮರ್, 51 ಕೆಜಿ ವಿಭಾಗದಲ್ಲಿ ನಂದಿನಿ ಸಲೋಖೆ ಹಾಗೂ 67 ಕೆಜಿ ವಿಭಾಗದಲ್ಲಿ ಪೂಜಾ ದೇವಿ ಅವರು ಪದಕ ಸುತ್ತಿಗೆ ಅರ್ಹತೆಯ ಪಡೆಯುವಲ್ಲಿ ವಿಫಲವಾಗಿದ್ದಾರೆ.