ಜಿಎಸ್‌ಟಿ ವಹಿವಾಟಿಗೆ ‘ಕುಬೇರ’ ಆ್ಯಪ್ ಅಭಿವೃದ್ಧಿ ಪಡಿಸಿದ ಮಂಡ್ಯ ವಿದ್ಯಾರ್ಥಿಗಳು!

0
5335

ಮಂಡ್ಯ, ಜೂನ್ 30 (www.justkannada.in): ಸರಕು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ವರ್ತಕರು ಸರಳವಾಗಿ ವಹಿವಾಟು ನಡೆಸಲು ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಗ್ಗದ ‘ಕುಬೇರ ಜಿಎಸ್‌ಟಿ ಸಾಫ್ಟ್‌ವೇರ್‌’ ಅಭಿವೃದ್ಧಿಪಡಿಸಿದ್ದಾರೆ.

ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಾದ ಜಿ.ರಾಕೇಶ್‌ ಹಾಗೂ ಜಿ.ಸಿ.ಶೈಲಜಾ ಅವರ ಕನಸಿನ ಕೂಸು ಈ ಕುಬೇರ ಸಾಫ್ಟವೇರ್‌. ಇಂಟರ್‌ನೆಟ್‌ ಸಂಪರ್ಕ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಈ ಸಾಫ್ಟ್‌ವೇರ್‌ ಮೂಲಕ ಖರೀದಿ, ಮಾರಾಟ ಹಾಗೂ ಉತ್ಪಾದನೆಯ ಮೇಲ್ವಿಚಾರಣೆ ನಡೆಸಬಹುದು.

ಕ್ಲೌಡ್‌ ಕಂಪ್ಯೂಟಿಂಗ್‌ ಮೂಲಕ ದತ್ತಾಂಶ ಸಂಗ್ರಹ, ಶೇಖರಣೆ ಹಾಗೂ ವಿಶ್ಲೇಷಣೆ ನಿರ್ವಹಿಸಬಹುದು. ಬೃಹತ್‌ ವಾಣಿಜ್ಯ ವ್ಯವಹಾರ ಮಾತ್ರವಲ್ಲದೆ ಸಣ್ಣ ಪ್ರಮಾಣದ ಕೈಗಾರಿಕೆ, ಹೋಟೆಲ್‌, ಬೇಕರಿ ವ್ಯವಹಾರವನ್ನೂ ಸುಲಭವಾಗಿ ಮಾಡುವಂತೆ ರೂಪಿಸಲಾಗಿದೆ. ಈ ಜಿಎಸ್‌ಟಿ ಸಾಫ್ಟ್‌ವೇರ್‌ನಲ್ಲಿ ವರ್ತಕರು ಕನ್ನಡದಲ್ಲೂ ವಹಿವಾಟು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ.