ಮಂಡ್ಯ, ನ.14, 2017 : (www.justkannada.in news ): ಅಕ್ರಮ ಗಣಿಕಾರಿಕೆಗೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಸಂಸದರು ಬೆದರಿಕೆ ಹಾಕಿದ ಘಟನೆ ನಡೆದಿದೆ.

ಮಂಡ್ಯ ಜೆಡಿಎಸ್ ಸಂಸದ ಸಿ.ಎಸ್. ಪುಟ್ಟರಾಜು ಅವರೇ , ಏಕವಚನ ಪ್ರಯೋಗ ಮಾಡಿ ಅಧಿಕಾರಿಗೆ ಬೆದರಿಕೆ ಹಾಕಿದವರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ್ ಗೆ ಬೆದರಿಕೆ. ಈ ವೇಳೆ ಜಿಲ್ಲಾಧಿಕಾರಿ ಮಂಜುಶ್ರೀ ಸ್ಥಳದಲ್ಲೇ ಇದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಂಡು ಬಂದಿದೆ.

‘ಏಯ್ ಏನ್ ಮಾಡ್ತೀಯಾ ಇಲ್ಲಿ. ನಿನ್ನನ್ನ ಸುಲಭವಾಗಿ ಬಿಡ್ತೀವಾ ಎಂದು ಗಣಿ ಮಾಲೀಕರ ಪರವಾಗಿ ಸಂಸದರು ಬೆದರಿಕೆ ಹಾಕಿದ್ದು, ಎಷ್ಟು ಸಾವಿರ ಜನರನ್ನು ಕರೆಸಬೇಕೋ ಕರಿಸ್ತೀನಿ. ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಮಾಡುವ ಬೆದರಿಕೆಯನ್ನೂ ಒಡ್ಡಿದರು. ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಅಧಿಕಾರಿಗಳಿಗೆ ಈ ಬೆದರಿಕೆ.

ಜಿಲ್ಲೆಯ ಬೇಬಿ ಬೆಟ್ಟ, ಚಿನಕುರಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ.ಎರಡು ತಿಂಗಳ ನಿಷೇಧ ಹೇರಿದ್ದ ಜಿಲ್ಲಾಧಿಕಾರಿ ಮಂಜುಶ್ರೀ. ಪರಿಣಾಮ ಸಂಸದರ ಒಡೆತನದ ಗಣಿಯೂ ಬಂದ್ . ಈ ಹಿನ್ನಲೆಯಲ್ಲಿ ಅಧಿಕಾರಿಗೆ ಬೆದರಿಕೆ ಆರೋಪ.

ಪರಿಸರ ಇಲಾಖೆಯ ಸಿ ಫಾರಂ ಹಾಗೂ ಅಕ್ರಮದ ಹಿನ್ನಲೆಯಲ್ಲಿ ಬಂದ್ ಮಾಡಿಸಿರೋ ಜಿಲ್ಲಾಡಳಿತ. ಗಣಿ ಮಾಲೀಕರನ್ನು ಡಿಸೀ ಕಚೇರಿಗೆ ಕರೆತಂದಿದ್ದ ಸಂಸದ ಪುಟ್ಟರಾಜು. ಡಿಸಿ, ಅಪರ ಡಿಸಿ, ಇಬ್ಬರು ಎಸಿ ಗಳ ಸಮ್ಮುಖದಲ್ಲೇ ಅಧಿಕಾರಿಗೆ ಬೆದರಿಕೆ ಹಾಕಿದ ಸಂಸದ ಪುಟ್ಟರಾಜು. ಹೇರಿಕೆ ಮಾಡಿರುವ ನಿಷೇದಾಜ್ಞೆ ಹಿಂಪಡೆಯಲು ಒತ್ತಡ. ಒತ್ತಡಕ್ಕೆ ಮಣಿಯದಕ್ಕೆ ಅಧಿಕಾರಿಗಳಿಗೆ ಧಮಕಿ.

ಇಲ್ಲಿದೆ ನೋಡಿ ಆವಾಜ್ ಹಾಕಿದ ವಿಡೀಯೋ….

key words : mandya-mining-mp-putaraju-threat-police