ಕುರುಕ್ಷೇತ್ರ ಚಿತ್ರದಲ್ಲಿ ಭಾನುಮತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ನಟಿ ರಮ್ಯಾ ನಂಬೀಸನ್…..

0
2235
mallywood-actress-ramya-nambisan-seen-heroine-kurukshetra

ಬೆಂಗಳೂರು,ಸೆ,17,2017(www.justkannada.in): ಬಹುಕೋಟಿ ವೆಚ್ಚದ ‘ಕುರುಕ್ಷೇತ್ರ‘ ಚಿತ್ರದಲ್ಲಿ ಮಾಲಿವುಡ್ ನ ನಟಿ ರಮ್ಯಾ ನಂಬೀಸನ್ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.mallywood-actress-ramya-nambisan-seen-heroine-kurukshetra

ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್ ಅಬ್ಬರಿಸಲಿದ್ದರೆ, ಪತ್ನಿ ಭಾನುಮತಿ ಪಾತ್ರದಲ್ಲಿ ನಟಿ ರಮ್ಯಾ ನಂಬೀಸನ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಭಾನುಮತಿಯಾಗಿ ರೆಜಿನಾ ಕ್ಯಾಸಂಡ್ರಾ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರ ಆಯ್ಕೆ ಸಾಧ್ಯವಾಗಿಲ್ಲ. ಆ ಜಾಗಕ್ಕೆ ಈಗ ಮಲಯಾಳಂ ಚಿತ್ರರಂಗದ ಪ್ರತಿಭೆ ರಮ್ಯಾ ನಂಬೀಸನ್ ಫಿಕ್ಸ್ ಆಗಿದ್ದಾರೆ.

ಮಾಲಿವುಡ್​ನಲ್ಲಿ ಕಳೆದ ಒಂದೂವರೆ ದಶಕದಿಂದ ಸಕ್ರಿಯವಾಗಿರುವ ರಮ್ಯಾ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. . ಕಳೆದ ವರ್ಷ ತೆರೆಕಂಡಿದ್ದ, ಗಣೇಶ್ ನಟನೆಯ ‘ಸ್ಟೈಲ್ ಕಿಂಗ್‘ ಚಿತ್ರದ ಮೂಲಕ ಕನ್ನಡಕ್ಕೂ ರಮ್ಯಾ ಕಾಲಿಟ್ಟಿದ್ದರು.

ಕುರುಕ್ಷೇತ್ರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ​ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ರಮ್ಯಾ ಅಕ್ಟೋಬರ್ ಮೊದಲ ವಾರದಲ್ಲಿ ಹೈದರಾಬಾದ್​ಗೆ ತೆರಳಿ ‘ಕುರುಕ್ಷೇತ್ರ‘ದ ಶೂಟಿಂಗ್ ಸೆಟ್ ಸೇರಿಕೊಳ್ಳುವ ಸಾಧ್ಯತೆ ಇದೆ. ಎನ್ನಲಾಗುತ್ತಿದೆ.

ಇನ್ನು ಕುಂತಿ ಪಾತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಅಭಿನಯಿಸಬೇಕಿತ್ತು. ಆದರೆ ಪ್ರಸ್ತುತ ‘ಡ್ರಾಮಾ ಜೂನಿಯರ್ಸ್‘ ರಿಯಾಲಿಟಿ ಶೋನಲ್ಲಿ ತೀರ್ಪಗಾರರಾಗಿ ಭಾಗವಹಿಸುತ್ತಿರುವ ಲಕ್ಷ್ಮೀ ಅವರಿಗೆ ‘ಕುರುಕ್ಷೇತ್ರ‘ಕ್ಕಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಮತ್ತೋರ್ವ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುಂತಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

key words:mallywood -actress Ramya Nambisan -seen -heroine – Kurukshetra