ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ `ಬಿಗ್ ಬಾಸ್’ ಕಾರ್ಯಕ್ರಮದ ಆ ವಿಡಿಯೋಗೆ ಸಂಬಂಧಿಸಿದಂತೆ ನಟಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕ ರಿಯಾಕ್ಷನ್ ಇದು….!

0
7434

mysore-bjp-malavika-kannada-actress-krishnaraja-mla

ಮೈಸೂರು, ಅ.11,2017 : (www.justkannada.in news ) : ನಟಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ಅವರು ಬಿಗ್ ಬಾಸ್ ಮನೆಯಲ್ಲಿನ ವಿಡಿಯೋ ತುಣುಕೊಂಡು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಾಳವಿಕ ಅವಿನಾಶ್ ಹಾಗೂ ವ್ಯಕ್ತಿಯೊಬ್ಬನ ನಡುವಿನ ಕೆಲ ಸಮಯದ ಖಾಸಗಿ ಸಂಭಾಷಣೆಯ ಪಿಸುಮಾತು , ಕಾರ್ಯಕ್ರಮಕ್ಕೆ ಆಲ್ ದಿ ಬೆಸ್ಟ್ ಎಂದು ಶುಭಕೋರಿದ್ದು ಬಳಿಕ ಕಡೆಯಲ್ಲಿ ಆ ವ್ಯಕ್ತಿಗೆ ಮಾಳವಿಕ ಮುತ್ತು ನೀಡಿದ್ದ ತುಣುಕು ಸೇರಿದಂತೆ ಕೆಲ ಸೆಕೆಂಡುಗಳ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೈಜ್ಯವಾದದ್ದೇ ಅಥವಾ ನಕಲಿಯೇ ಎಂಬುದು ಸಹ ರುಜುವಾತುಗೊಂಡಿಲ್ಲ. ಆದರೂ ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಎಡೆಮಾಡಿತ್ತು. ಖಾಸಗಿ ವಾಹಿನಿಯ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಖಾಸಗಿ ನಡೆತೆಯ ಬಗೆಗೂ ಕೊಂಕು ನುಡಿಗಳು ವ್ಯಕ್ತವಾಗಿದ್ದವು.

ಈ ನಡುವೆ , ಖಾಸಗಿ ವಾಹಿನಿಯಲ್ಲಿ ಸದ್ಯದಲ್ಲೇ ಮತ್ತೆ ` ಬಿಗ್ ಬಾಸ್ ‘ ಕಾರ್ಯಕ್ರಮದ ಮುಂದಿನ ಸೀಸನ್ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ವೀಕ್ಷಕರ ಗಮನ ಸೆಳೆಯಲು ಮಾಡಿರುವ ಗಿಮಿಕ್ಕೇ ಈ ವಿಡಿಯೋ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈರಲ್ ಆದ ವಿಡಿಯೋಗೆ ಸಂಬಂಧಿಸಿದಂತೆ ಖುದ್ದು ನಟಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕ ಅನಿವಾಶ್ ಅವರನ್ನು ಜಸ್ಟ್ ಕನ್ನಡ ಡಾಟ್ ಇನ್ ಸಂಪರ್ಕಿಸಿ ಸ್ಪಷ್ಟನೆ ಪಡೆಯಲು ಯತ್ನಿಸಿತು. ಈ ವೇಳೆ ದೂರವಾಣಿ ಮೂಲಕ `ಜಸ್ಟ್ ಕನ್ನಡ’ ಜತೆ ಮಾತನಾಡಿದ ಮಾಳವಿಕ
` ಐ ಡೊಂಟ್ ವಿಶ್ ಟು ಕಮೆಂಟ್ ಆನ್ ದಿಸ್, ಥ್ಯಾಂಕ್ಯೂ…’ ಎಂದು ಹೇಳಿ ಸಂಪರ್ಕ ಕಡಿತಗೊಳಿಸಿದರು.

key words : malavika-big-boss-viral-video-kannada-bjp-politician-mysore