ಕೇಂದ್ರದ ಮೇಕ್  ಇನ್ ಇಂಡಿಯಾ ಯೋಜನೆ ವಿಫಲ; ಸುಳ್ಳು  ಭರವಸೆ ನೀಡುವಲ್ಲಿ ನಿರತರಾಗಿರುವ ಪ್ರಧಾನಿ ಮೋದಿ- ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ  ರಾಹುಲ್ ಗಾಂಧಿ ವಾಗ್ದಾಳಿ…

0
529
make-in-india-failed-prime-minister-narendra-modi-lying-rahul-gandhi

ರಾಯಚೂರು, ಆ.12,2017(www.justkannada.in): ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ವಿಫಲವಾಗಿದ್ದು, ಸುಳ್ಳು ಭರವಸೆ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರತರಾಗಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.make-in-india-failed-prime-minister-narendra-modi-lying-rahul-gandhi

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ‘ಕಾಂಗ್ರೆಸ್ ಪಕ್ಷವು ನಮ್ಮ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗೆ ಸರ್ಕಾರದ ಸಾಧನೆಗಳೇ ಆಸ್ತಿ ಎಂದರು.

 ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ರೈತರ ಪರವಾಗಿದೆ. ರೈತರು ದುರ್ಬಲವಾದರೇ ದೇಶವೂ ದುರ್ಬಲವಾಗುತ್ತದೆ. ಪ್ರಧಾನಿ ಮೋದಿ ಅವರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಮೇಕ್ ಇನ್ ಇಂಡಿಯಾದಿಂದ ಕರ್ನಾಟಕದಲ್ಲಿ ಮಾತ್ರ ಯಾರಿಗೂ ಕೆಲಸ ಸಿಕ್ಕಿಲ್ಲ. ನಾವು ಕೆಲಸ ಕೊಟ್ಟಿದ್ದೇವೆ, ಇದೇ ನಮಗೂ, ಬಿಜೆಪಿಗೂ ಇರುವ ವ್ಯತ್ಯಾಸ.  ಬರಿ ಅವರದು ಪೊಳ್ಳು ಭರವಸೆ. ನೋಟ್ ಬ್ಯಾನ್ ಎಪೆಕ್ಟ್  ಜನರಿಗೆ ಗೊತ್ತಾಗುತ್ತಿದೆ ಎಂದು ಖಾರವಾಗಿ ಟೀಕಿಸಿದರು.

 ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚು ಅನುದಾನ ನೀಡಿದ್ದು ನಾವೇ. ಈ ಭಾಗದ ಜನರಿಗೆ 60 ವೈದ್ಯಕೀಯ ಸೀಟುಗಳು ದೊರೆಯುತ್ತಿತ್ತು. ಸೀಟುಗಳ ಸಂಖ್ಯೆ 640ಕ್ಕೆ ಏರಲು ನಮ್ಮ ಸರ್ಕಾರವೇ ಕಾರಣ ಎಂದು ಗುಣಗಾನ ಮಾಡಿದ ರಾಗಾ, ನಮ್ಮ ಆಡಳಿತವಿರುವ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ನಾನು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೆ. ನಾನು ಮನವಿ ಮಾಡಿದ ಎರಡೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು 2 ಕೋಟಿ ಉದ್ಯೋಗ ಕೊಡುವ ಆಶ್ವಾಸನೆ ಕೊಟ್ಟಿದ್ದರು.ಆದರೆ ಅವರು ಎಲ್ಲಿ ಹೋದರೂ ಸುಳ್ಳು ಆಶ್ವಾಸನೆ ಕೊಡುತ್ತಾರೆ. ಸಿದ್ದರಾಮಯ್ಯ 30 ಸಾವಿರ ಸರ್ಕಾರಿ ಉದ್ಯೋಗ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದ್ದನ್ನು ಮಾಡುತ್ತದೆ, ರೈತರಿಗೆ ಗೊತ್ತು ನಾವು ನೆರವಾಗುತ್ತೇವೆ. ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ 2,500 ಕೋಟಿ ಅನುದಾನ ನೀಡಲಾಗಿದೆ. ಇನ್ನು 1,500 ಕೋಟಿ ವೆಚ್ಚ ಮಾಡುವ ಉದ್ದೇಶವಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು.

Key words:  make in India- failed- Prime Minister Narendra Modi – lying -Rahul Gandhi