ನಟನೆಯಲ್ಲಿ ಮಾತ್ರವಲ್ಲ ಗಾಲ್ಫ್’ನಲ್ಲೂ ಮಾಧವನ್ ಕಮಾಲ್ !

0
296

ಮುಂಬೈ, ಜನವರಿ 12 (www.justkannada.in): ಖ್ಯಾತ ನಟ ಆರ್.ಮಾಧವನ್ ಇದೀಗ ಗಾಲ್ಫ್ ಆಟಗಾರ. ‘ಅಲೈಪಾಯುದೈ’ ಹೀರೋ ಮುಂಬೈ ಅರ್ಹತಾ ಸುತ್ತಿನಲ್ಲಿ ಗೆದ್ದು, ರಾಷ್ಟ್ರೀಯ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿದ್ದಾರೆ. ಏಪ್ರಿಲ್ 4ರಿಂದ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.

ಹವ್ಯಾಸಕ್ಕಾಗಿ ಗಾಲ್ಫ್ ಆಡಲು ಶುರುಮಾಡಿದ್ದ ನಟ ಮಾಧವನ್, ಇದನ್ನು ಗಂಭೀರವಾಗಿ ಪರಿಗಣಿಸಿದರು. ಇತರೆ ಸೆಲೆಬ್ರಿಟಿಗಳಂತೆ ಆಟವನ್ನು ಹವ್ಯಾಸವಾಗಿರಿಸಿಕೊಳ್ಳದೇ ಒಂದು ಹೆಜ್ಜೆ ಮುಂದೆ ಸಾಗಿದರು. ಇದೀಗ ರಾಷ್ಟ್ರೀಯ ಗಾಲ್ಫ್ ಚಾಂಪಿಯನ್‌’ಶಿಪ್‌’ನ ಫೈನಲ್ಸ್‌’ಗೆ ಆಯ್ಕೆಯಾಗಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇಲ್ಲಿನ ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್‌’ನಲ್ಲಿ ನಡೆದ ಮರ್ಸಿಡೆಸ್ ಗಾಲ್ಫ್ ಟ್ರೋಫಿ ಪಂದ್ಯಾವಳಿಯಲ್ಲಿ 69.6 ಅಂಕಗಳನ್ನು ಕಲೆಹಾಕುವ ಮೂಲಕ ಮಾಧವನ್ ಫೈನಲ್ಸ್‌’ಗೆ ಅರ್ಹತೆ ಪಡೆದರು. ಇದರೊಂದಿಗೆ 47 ವರ್ಷ ವಯಸ್ಸಿನ ಮಾಧವನ್ ಏ.4ರಿಂದ 6ರ ವರೆಗೆ ಪುಣೆಯಲ್ಲಿನ ಆಕ್ಸ್’ಫರ್ಡ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಗಾಲ್ಫ್ ಫೈನಲ್ಸ್‌’ನಲ್ಲಿ ಸ್ಪರ್ಧಿಸಲಿದ್ದಾರೆ.