ದೆಹಲಿಯ ದ್ವಾರಕಾ ಹೋಟೆಲ್ ನಲ್ಲಿ ಬೆಂಕಿ: ಕ್ರಿಕೆಟಿಗ ಎಂ ಎಸ್ ಧೋನಿ ಹಾಗೂ ಇತರ ಆಟಗಾರರು ಅಪಾಯದಿಂದ ಪಾರು

0
1287

ನವದೆಹಲಿ:ಮಾ-17:ದೆಹಲಿಯ ಸೆಕ್ಟರ್‌ 10ರಲ್ಲಿನ ದ್ವಾರಕಾ ವೆಲ್‌ಕಂ ಹೊಟೇಲ್‌ನಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಹೊಟೇಲಿನಲ್ಲಿ ತಂಗಿದ್ದ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆ 6.30ರ ಹೊತ್ತಿಗೆ ಹೊಟೇಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿದ್ದು, ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಗಿದೆ. ಎಂ.ಎಸ್.ಧೋನಿ ಮತ್ತು ಜಾರ್ಖಂಡ್ ತಂಡದ ಹಲವು ಕ್ರಿಕೆಟ್ ಆಟಗಾರರು ಇದೇ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿದ್ದರು.

ಈ ಅವಘಡದಲ್ಲಿ ಯಾವುದೇ ಜೀವ ಸಾನಿ ಸಂಭವಿಸಿಲ್ಲ; ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಜಾಖಂಡ್‌ ತಂಡದ ನಾಯಕತ್ವ ವಹಿಸಿರುವ ಧೋನಿ ಅವರು ವಿಜಯ್‌ ಹಜಾರೆ ಟ್ರೋಫಿಯ ಸೆಮಿ ಫೈನಲ್‌ ಪಂದ್ಯವನ್ನು ಆಡಲು ದಿಲ್ಲಿಗೆ ಬಂದಿದ್ದಾರೆ. ಧೋನಿ ಮತ್ತು ಅವರ ತಂಡದವರನ್ನು ಹೊಟೇಲಿನಲ್ಲಿ ಬೆಂಕಿ ಅಪಘಾತ ಸಂಭವಿಸಿದೊಡನಯೇ ಸುರಕ್ಷಿತವಾಗಿ ಪಾರುಗೊಳಿಸಲಾಯಿತಾದರೂ ಅವರ ಆಟದ ಕಿಟ್‌ ಮಾತ್ರ ಸುಟ್ಟು ಬೂದಿಯಾಗಿದೆ. ಈ ಪರಿಣಾಮವಾಗಿ ಕ್ರಿಕೆಟ್‌ ಪಂದ್ಯವನ್ನು ನಾಳೆಗೆ ಮುಂದೂಡಲಾಗಿದೆ.

M S Dhoni,Rescued,safely,hotel-fire dwarka-delhi