ಮೈಸೂರು, ಜನವರಿ 30 (www.justkannada.in):, ನಾಳೆ ಸಂಜೆ ಒಂದೇ ಬಾರಿಗೆ ನೀಲಿ ಚಂದ್ರ, ದೈತ್ಯ
ಚಂದ್ರ ಹಾಗೂ ತಾಮ್ರ ಚಂದ್ರನನ್ನು ನೋಡುವ ಅವಕಾಶ ಬಂದಿದೆ…

ಎರಡು ಹುಣ್ಣಿಮೆ ಒಂದೇ ತಿಂಗಳಲ್ಲಿ (ಜನವರಿ 1, 2018 ಮತ್ತು ಜನವರಿ 31, 2018) ಬಂದರೆ,
ಎರಡನೇ ಹುಣ್ಣಿಮೆಯನ್ನು ನೀಲಿ ಚಂದ್ರ ಎಂದು ಕರೆಯಲಾಗುತ್ತದೆ. ಸ್ನೇಹಿತರು, ನೆಂಟರು, ನೆರೆಹೊರೆಯವರೊಂದಿಗೆ ಆಕಾಶದಲ್ಲಿ ವಿಶಿಷ್ಟವಾಗಿ ಘಟಿಸುವ ಚಂದ್ರ ಗ್ರಹಣವನ್ನು ತಪ್ಪದೆ ವೀಕ್ಷಿಸಿ ಡೋಂಟ್ ಮಿಸ್! 

ನೀಲಿ ಚಂದ್ರ, ದೈತ್ಯ ಚಂದ್ರ ಹಾಗೂ ತಾಮ್ರ ಚಂದ್ರನನ್ನು ಒಂದೇ ಬಾರಿಗೆ ನೋಡಿರುವುದು 150 ವರ್ಷಗಳ ಹಿಂದೆ 31 ಮಾರ್ಚ್ 1866ರಂದು. 6.18ರ ಹೊತ್ತಿಗೆ ಪೂರ್ಣ ಗ್ರಹಣವಾಗಿರುತ್ತದೆ, 7.31ಕ್ಕೆ ಚಂದ್ರ ಕೆಂಪಾಗಿ ಕಾಣುವುದು ಮುಗಿದು
ಸಿಮೆಂಟ್ ಬಣ್ಣದ ಚಂದ್ರನಂತೆ ಕಾಣುತ್ತದೆ. ಸಂಪೂರ್ಣ ಗ್ರಹಣ ಬಿಡುವುದು ಸುಮಾರು ರಾತ್ರಿ 9.38ರ ಹೊತ್ತಿಗೆ.

ಬ್ರೇಕ್ ಥ್ರೂ  ಸೈನ್ಸ್ ಸೊಸೈಟಿ ಜಿಲ್ಲಾ ಘಟಕ ವಿವಿಧೆಡೆ ಟೆಲಿಸ್ಕೋಪ್’ಗಳೊಂದಿಗೆ ಕಾರ್ಯಕ್ರಮ ಆಯೋಜಿಸುತ್ತಿದೆ. ಹೆಚ್ಚಿನ ಮಾಹಿತಿಗೆ 9060071720, 9481415980, 9448565534 ಅಥವಾ  www.breakthrough-india.org , breakthrough science society youtube channel, ನೋಡಬಹುದು. 

ಸ್ಥಳಗಳು :ಶ್ರೀ ವಾಸವಿ ವಿದ್ಯಾಸಂಸ್ಥೆ, ದೊಡ್ಡಪೇಟೆ, ಚಿತ್ರದುರ್ಗ
ವಿಶ್ವಮಾನವ ಸಂಯುಕ್ತ ಪದವಿಪೂರ್ವ ಕಾಲೇಜು,
ಸೀಬಾರ-ಗುತ್ತಿನಾಡು, ಚಿತ್ರದುರ್ಗ ತಾ.
ಶ್ರೀ ವಿದ್ಯಾವಿಕಾಸ ವಿದ್ಯಾಸಂಸ್ಥೆ, ಚಿತ್ರದುರ್ಗ