ವಿಶ್ವ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರಿಗೂ ಸ್ಥಾನ !

0
5726

ನವದೆಹಲಿ, ಜುಲೈ 18 (www.justkannada.in): ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರೂ ಸ್ಥಾನ ಪಡೆದಿದ್ದಾರೆ. 49 ರಾಷ್ಟ್ರಗಳ ಅಧ್ಯಯನದಲ್ಲಿ ಭಾರತ 39 ನೇ ಸ್ಥಾನ ಪಡೆದಿದೆ!

ಹೌದು. ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದೆ. ಇದರಲ್ಲಿ ಭಾರತೀಯರು ಪ್ರತಿದಿನ ಸರಾಸರಿ 4,297 ಹೆಜ್ಜೆ ಇಡುತ್ತಾರೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. ವಿಶ್ವದ ಅತ್ಯಂತ ಸೋಮಾರಿ ರಾಷ್ಟ್ರ ಇಂಡೋನೇಷ್ಯಾ ಆಗಿದ್ದು, ಕನಿಷ್ಠ ಸೋಮಾರಿತನವಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ.

ವಿಶೇಷವಾಗಿ ಹಾಂಕ್ ಕಾಂಗ್ ನಲ್ಲಿರುವವರು ಹೆಚ್ಚು ಕ್ರಿಯಾಶೀಲರು ಎಂದು ಅಧ್ಯಯನ ವರದಿ ತಿಳಿಸಿದೆ. ಅಧ್ಯಯನ ವರದಿಗಾಗಿ ಸ್ಮಾರ್ಟ್ ಫೋನ್ ಆಕ್ಟಿವಿಟಿ ಮೂಲಕ ವಿಶ್ವದ 46 ರಾಷ್ಟ್ರಗಳಲ್ಲಿ 700,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಪ್ರತಿದಿನ ಸರಾಸರಿ 3,513 ಹೆಜ್ಜೆ ಇಡುವ ಇಂಡೋನೇಷ್ಯಾದಲ್ಲಿರುವವರು ಹೆಚ್ಚು ಸೋಮಾರಿಗಳೆಂದು ಅಧ್ಯಯನ ವರದಿ ತಿಳಿಸಿದೆ.