ಬೆಂಗಳೂರು, ಫೆಬ್ರವರಿ 12 (www.justkannada.in): ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಲೆಕ್ಸಾಂಡರ್ ಗೇಬ್ರಿಯಲ್ ಪಾತ್ರ ಮಾಡುವ ಮೂಲಕ ಖ್ಯಾತಿ ಗಳಿಸಿದ ಚಂದನ್ ಆಚಾರ್ಯ ನಾಯಕನಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆಯುತ್ತಿದ್ದಾರೆ.

ಹೌದು. ಆರ್.ವೆಂಕಟೇಶ್ ಬಾಬು ಅವರ ಸಿನಿಮಾದಲ್ಲಿ ಚಂದನ್ ನಾಯಕನಾಗಿ ನಟಿಸಲಿದ್ದಾರೆ. ಬಾಬು ಅವರು ಕಳೆದ ಏಳು ವರ್ಷಗಳಿಂದ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು 10ರಿಂದ 15 ಸಿನಿಮಾಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ಕೆಲವು ಸಿನಿಮಾಗಳನ್ನು ಹೆಸರಿಸುವುದಾದರೆ ನಿರ್ದೇಶಕ ಕೃಷ್ಣ ಅವರ ಜೊತೆ ಹೆಬ್ಬುಲಿಯಲ್ಲಿ ಮತ್ತು ಆರ್ .ಚಂದ್ರು ಅವರ ಬಳಿ ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ಡಿಜೆ ಸಿನಿಮಾಕ್ಕೆ ಸ್ವತಃ ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನೂ ಹೆಸರಿಡದ ಈ ಸಿನಿಮಾವನ್ನು ಡಾ.ಆರ್.ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದು ರಾಘವೇಂದ್ರ ಬಿ.ಕೋಲಾರ ಅವರ ಛಾಯಾಗ್ರಹಣವಿದೆ. ಯಶ್ ಅವರ ಜೊತೆಗೆ ಕೆಲಸ ಮಾಡಿರುವ ರಾಘವೇಂದ್ರ ಅವರಿಂದ ಸಿಕ್ಕಿರುವ ಬೆಂಬಲಕ್ಕೆ ಖುಷಿಯಾಗಿದ್ದಾರೆ. ಮಾರ್ಚ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅಂದೇ ಚಿತ್ರದ ಶೀರ್ಷಿಕೆ ಕೂಡ ಘೋಷಣೆಯಾಗಲಿದೆ.

ಕಟೇಶ್ ಬೆಂಗಳೂರು ಡೇಸ್ ಮತ್ತು ರಾಜ ರಾಣಿ ಖ್ಯಾತಿಯ ಮಲಯಾಳಂ ನಟಿ ನಜ್ರಿಯಾ ನಾಜಿಮ್ ಅವರನ್ನು ಹಿರೋಯಿನ್ ಆಗಿ ತರುವ ಯೋಜನೆಯಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ಚಿತ್ರ ನಿರ್ಮಾಪಕರು ಮತ್ತು ನಟಿ ಮಧ್ಯೆ ಮಾತುಕತೆ ನಡೆಯುತ್ತಿದೆ. ಇನ್ನು ನಜ್ರಿಯಾ ಅವರಿಂದ ಅಂತಿಮ ಒಪ್ಪಿಗೆ ಸಿಕ್ಕಲಷ್ಟೇ ಬಾಕಿಯಿದೆ.