ಖರ್ಜೂರದ ಲಡ್ಡು ಮಾಡುವ ವಿಧಾನ

0
561

ಬೇಕಾಗುವ ಪದಾರ್ಥಗಳು
ಖರ್ಜೂರ 1 ಬಟ್ಟಲು
ತುಪ್ಪ – 2 ಚಮಚ
ಬಾದಾಮಿ – ಕತ್ತರಿಸಿದ್ದು ಸ್ವಲ್ಪ
ಗೋಡಂಬಿ- ಕತ್ತರಿಸಿದ್ದು ಸ್ವಲ್ಪ
ದ್ರಾಕ್ಷಿ – 2 ಚಮಚ
ತುರಿದ ಕೊಬ್ಬರಿ – ಸ್ವಲ್ಪ
ಗಸಗಸೆ – 1 ಚಮಚ

ಮಾಡುವ ವಿಧಾನ…
ಮೊದಲು ಖರ್ಜೂರವನ್ನು ತೆಗೆದುಕೊಂಡು ಬೀಜ ತೆಗೆದು ರುಬ್ಬಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ತುಪ್ಪವನ್ನು ಹಾಕಬೇಕು. ನಂತರ ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊಬ್ಬರಿ, ಗಸಗಸೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು,
ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರವಾದ ಖರ್ಜೂರದ ಲಡ್ಡು ಸವಿಯಲು ಸಿದ್ಧ.