ಬೆಂಗಳೂರು,ಜೂ,19,2017(www.justkannada.in):  ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ವಿಧೇಯಕ 2017 ಸಂಪೂರ್ಣ  ಸರಿಯಿಲ್ಲ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.Karnataka state university bureau, 2017- not- complete - ABVP national general secretary -Vinay Bidare

ಈ ಕುರಿತು ಮಾತನಾಡಿದ ವಿನಿಯ್  ಬಿದರೆ, ಈ ಹಿಂದೆ ಕೂಡ ವಿಶ್ವವಿದ್ಯಾಲಯಕ್ಕೆ ವಿದೇಯಕ ಮಂಡನೆ ಮಾಡಲಾಗಿತ್ತು. ಈಗ ಮಂಡನೆಯಾಗಿರೋ ವಿಧೇಯಕ ಸಂಪೂರ್ಣ ಸರಿಯಿಲ್ಲ. ಇದರಿಂದ ಕುಲಾಧಿಪತಿಯಾಗಿರೋ ರಾಜ್ಯಪಾಲರ ಕೈ ಕಟ್ಟಿಹಾಕಲಾಗಿದೆ. ಇಲ್ಲಿ ಸರ್ಕಾರ ಮತ್ತು ಸಚಿವರದ್ದೇ ಪರಮಾಧಿಕಾರವಾಗಲಿದೆ ಎಂದು ಕಿಡಿ ಕಾರಿದರು.

ಹೊಸತನಕ್ಕೆ ನಮ್ಮ ವಿರೋಧವಿಲ್ಲ, ಆದ್ರೆ ಬಂದ ಸಚಿವರೆಲ್ಲಾ ಬದಲಾವಣೆ ತರಲು ಹೊರಟರೆ ಎಷ್ಟರ ಮಟ್ಟಿಗೆ ಸರಿ. ಕುಲಪತಿ ಮತ್ತಿತರ ಹುದ್ದೆಗಳಿಗೆ ಐಎಎಸ್, ಕೆಎಎಸ್ ಅಧಿಕಾರಿಗಳ  ನೇಮಕ ಸರಿಯಲ್ಲ.ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗಲಿದೆ ಎಂದು ವಿನಯ್ ಬಿದರೆ ಆಕ್ರೋಶ ವ್ಯಕ್ತಪಡಿಸಿದರು.

Key words: Karnataka state university bureau, 2017-  not- complete – ABVP national general secretary -Vinay Bidare