ನಟಿ ಶಿಲ್ಪಾ ಶೆಟ್ಟಿಗೆ ‘ಕರ್ನಾಟಕ ಪ್ರೈಡ್’ ಪ್ರಶಸ್ತಿ

0
259

ಬೆಂಗಳೂರು, ಜನವರಿ 11 (www.justkannada.in): ಕರ್ನಾಟಕ ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಚಿತ್ರ ಕಲಾವಿದ ಬಿ.ಕೆ.ಎಸ್. ವರ್ವ ಸೇರಿ ಒಟ್ಟು 8 ಜನರಿಗೆ ಲೇಡೀಸ್ ಸರ್ಕಲ್ ಇಂಡಿಯಾ ಮತ್ತು ರೌಂಡ್ ಟೇಬಲ್ ಇಂಡಿಯಾ ಪ್ರೖೆಡ್ ಆಫ್ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.karnataka-pride-award-for-actress-shilpa-shetty

ಆರೋಗ್ಯ ಮತ್ತು ದೈಹಿಕ ದೃಢತೆಗೆ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ, ಕ್ರೀಡೆಯಲ್ಲಿ ಸಯ್ಯದ್ ಕಿರ್ವನಿ, ರಂಗಕಲೆಗೆ ಅರುಂಧತಿ ರಾಜಾ ಮತ್ತು ಜಗದೀಶ್ ರಾಜಾ, ಸಮಾಜ ಸೇವೆಗೆ ಸುಪರ್ಣಾ ಗಂಗೂಲಿ, ಮನರಂಜನೆಗಾಗಿ ದಾನಿಶ್ ಸೇಟ್, ಕಲೆಗಾಗಿ ಡಾ. ಬಿ.ಕೆ.ಎಸ್. ವರ್ವ ಮತ್ತು ಉದ್ಯಮಶೀಲತೆಗಾಗಿ ಮೀನಾಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ವಿತರಿಸಿ ಮಾತನಾಡಿದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ, ಭಾರತ ಅತ್ಯಂತ ಪ್ರಾಚೀನ ಪರಂಪರೆ ಹಾಗೂ ಸಂಸ್ಕೃತಿಗೆ ಹೆಸರಾದ ದೇಶ. ಇಂತಹ ಸಂಸ್ಕೃತಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನಕ್ಕೆ ಪ್ರಶಸ್ತಿ ಪುರಸ್ಕೃತರೆಲ್ಲರೂ ಪ್ರಯತ್ನಿಸಿದ್ದಾರೆ. ಈ ಎಲ್ಲ ಅಂಶಗಳೊಂದಿಗೆ ಮನುಷ್ಯನಲ್ಲಿ ಮಾನವೀಯತೆ, ಸಮಾಜಿಕ ಕಳಕಳಿ ಇನ್ನಷ್ಟು ಬೆಳೆಯಬೇಕಿದೆ ಎಂದು ಹೇಳಿದರು.