ಅಸಹನೆ ವಾತಾವರಣ : ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ತಿರಸ್ಕರಿಸಿದ ಜಿ.ರಾಜಶೇಖರ್.

0
146

kannada-sahithya-ackademy-award-reject-rajashekar

ಬೆಂಗಳೂರು, ಜ.11, 2017 :(www.justkannada.in news ) ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸದಿರಲು ಸಾಹಿತಿ ಜಿ. ರಾಜಶೇಖರ್ ನಿರ್ಧರಿಸಿದ್ದಾರೆ.

ಜಿ. ರಾಜಶೇಖರ್ ಅವರ ‘ಬಹುವಚನ ಭಾರತ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ. ಆದರೆ ಅಕಾಡೆಮಿಯ ಗೌರವಕ್ಕೆ ಕೃತಜ್ಞತೆ ಸಲ್ಲಿಸಿರುವ ಜಿ. ರಾಜಶೇಖರ್, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಾಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ.

2015ರಲ್ಲಿ ಅಸಹನೆಯ ವಾತಾವರಣವಿತ್ತು. ಈಗ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಮಾತ್ರವಲ್ಲದೆ ಭಿನ್ನಮತ ತಲೆ ಎತ್ತದಂತೆ ಮಾಡುತ್ತಿದ್ದಾರೆ. ಇದು ಅಸಹನೆಯ ಇನ್ನೊಂದು ಆವೃತ್ತಿ. ಈ ಪರಿಸ್ಥಿತಿ ಸರಿಹೋಗುತ್ತದೆ ಎಂಬ ಯಾವುದೇ ಆಶಾವಾದ ಇಲ್ಲ. ಹಾಗಾಗಿ ನಾನು ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದಿದ್ದಾರೆ.

 
key words : kannada-sahithya-ackademy-award-reject-rajashekar