ಬೆಂಗಳೂರು, ಮಾ.09, 2017 :(www.justkannada.in news ) ಕನ್ನಡದ ಒಂದು ಕಾಲದ ಜನಪ್ರಿಯ ಚಿತ್ರ ನಿರ್ದೆಶಕ ಎ.ಟಿ.ರಘು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಆರ್ಥಿಕ ನೆರವಿನ ಮೊರೆ ಹೋಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಮೂವತ್ತಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕ ಎ.ಟಿ. ರಘು ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊಡಗಿನವರಾದ ರಘು 1980ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ನ್ಯಾಯ ನೀತಿ ಧರ್ಮ‘, ‘ಅವಳ ನೆರಳು’, ‘ಧರ್ಮಯುದ್ಧ’, ‘ಗೂಂಡಾಗುರು’, ‘ಕಾಡಿನ ರಾಜ’, ‘ಮಿಡಿದ ಹೃದಯಗಳು’, ‘ಕೆಂಪು ಸೂರ್ಯ’, ‘ಅಜಯ್ ವಿಜಯ್’, ‘ಮೈಸೂರು ಜಾಣ’, ‘ಪುಟ್ಟ ಹೆಂಡ್ತಿ’, ‘ಸೂರ್ಯೋದಯ’, ‘ಜೈಲರ್ ಜಗನ್ನಾಥ್’, ‘ಮಂಡ್ಯದ ಗಂಡು’, ‘ಬೇಟೆಗಾರ’,
‘ಅಗ್ನಿಸಾಕ್ಷಿ’ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಘು ಅವರ ನಿರ್ದೇಶನದ 20 ಸಿನಿಮಾಗಳಲ್ಲಿ ಅಂಬರೀಷ್ ಅವರು ನಾಯಕನಟನಾಗಿ ನಟಿಸಿದ್ದಾರೆ. ಅಲ್ಲದೆ, 1994ರಲ್ಲಿ ಹಿಂದಿಯಲ್ಲಿ ನಿರ್ದೇಶಿಸಿದ್ದ ‘ಮೇರಿ ಅದಾಲತ್’ ಚಿತ್ರದಲ್ಲಿ ಖ್ಯಾತ ನಟ ರಜನಿಕಾಂತ್ ನಟಿಸಿದ್ದು ಗಮನಾರ್ಹ.

ರಘು ಅವರಿಗೆ ಧನಸಹಾಯ ಮಾಡಲು ಬ್ಯಾಂಕ್ ಖಾತೆಯ ವಿವರ: ಎ.ಟಿ. ರಘು, ಕೋಟಕ್ ಮಹೀಂದ್ರ ಬ್ಯಾಂಕ್, ಖಾತೆ ಸಂಖ್ಯೆ: 144010031268, ಐಎಫ್‌ಎಸ್‌ಸಿ ಕೋಡ್‌: ಕೆಕೆಬಿಕೆ0008272, ಮಡಿಕೇರಿ ಶಾಖೆ.

key words : kannada-film-director-a.t.raghu-hospitalised-help-bangalore

 

ENGLISH SUMMARY :

Kidney Failure: film director AT Raghu appeal to support . popular film director was sick bed-ridden .
Raghu’s bank account to fund them in detail: AT Raghu, Kotak Mahindra Bank, account number: 144010031268