ಬೆಂಗಳೂರು, ನವೆಂಬರ್ 13 (www.justkannada.in): ಡಾ. ರಾಜ್​ಕುಮಾರ್ ಅಭಿನಯಿಸಿದ್ದ ‘ದಾರಿ ತಪ್ಪಿದ ಮಗ’ ಹಾಗೂ ಡಾ. ವಿಷ್ಣುವರ್ಧನ್ ನಾಯಕತ್ವದ ‘ಒಂದೇ ಗುರಿ’ ಚಿತ್ರಗಳು ಈ ತಿಂಗಳು ಮತ್ತೆ ಬಿಡುಗಡೆ ಆಗುತ್ತಿವೆ.

1975ರಲ್ಲಿ ಬಿಡುಗಡೆ ಆಗಿದ್ದ ‘ದಾರಿ ತಪ್ಪಿದ ಮಗ’ ಚಿತ್ರವನ್ನು ಪೇಕೇಟಿ ಶಿವರಾಮ್ ನಿರ್ವಿುಸಿ, ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಡಾ. ರಾಜ್​ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಜತೆಗೆ ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ, ಕೆ.ಎಸ್. ಅಶ್ವತ್ಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಪ್ರಮುಖಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಅದೇ ಚಿತ್ರದ ಹೊಸ ಕಾಪಿ ಸಿದ್ಧವಾಗಿದ್ದು, ಮತ್ತೆ ಬಿಡುಗಡೆ ಆಗಲಿದೆ.

ನ. 17ರಂದು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರಮುಖವಾಗಿ ಬಿಡುಗಡೆ ಆಗಲಿದ್ದು, ಪ್ರತಿದಿನ 4 ಪ್ರದರ್ಶನ ಇರಲಿದೆ. ಜತೆಗೆ ಅಂದೇ ರಾಜ್ಯಾದ್ಯಂತ 60ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭ ಆಗಲಿದೆ.

ಹಾಗೆಯೇ ವಿಷ್ಣುವರ್ಧನ್ ಅಭಿನಯದ ‘ಒಂದೇ ಗುರಿ’ ಚಿತ್ರ ಕೂಡ ಇದೇ ತಿಂಗಳಲ್ಲಿ ಮರು ಬಿಡುಗಡೆ ಆಗಲಿದೆ. ಎಂ.ಪಿ. ಶಂಕರ್ ನಿರ್ವಣ, ಭಾರ್ಗವ ನಿರ್ದೇಶನದ ಈ ಚಿತ್ರ 1983ರಲ್ಲಿ ಬಿಡುಗಡೆ ಆಗಿತ್ತು. ಇದರಲ್ಲಿ ವಿಷ್ಣುವರ್ಧನ್ ಜತೆಗೆ ಮಾಧವಿ, ಎಂ.ಪಿ. ಶಂಕರ್, ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇದೀಗ ಇದರ ಹೊಸಕಾಪಿ ಕೂಡ ಸಿದ್ಧವಾಗಿದೆ. ‘ಒಂದೇ ಗುರಿ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ಚಿತ್ರಮಂದಿರ ಹಾಗೂ ದಿನಾಂಕ ನಿಗದಿಯಾಗಿಲ್ಲ. ಒಟ್ಟಿನಲ್ಲಿ ನವೆಂಬರ್​ನಲ್ಲೇ ಮರುಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.