‘ಮುಗುಳುನಗೆ’ಯಲ್ಲಿ ಗೋಲ್ಡನ್ ಸ್ಟಾರ್ ಹೊಸ ಹೇರ್’ಸ್ಟೈಲ್’ಗೆ ಫ್ಯಾನ್ಸ್ ಫಿದಾ!

0
1029

ಬೆಂಗಳೂರು, ಮಾರ್ಚ್ 18 (www.justkannada.in) ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್ಟರ ಜೋಡಿಯ ‘ಮುಗುಳುನಗೆ’ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಈ ನಡುವೆ ಗಣೇಶ್ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

‘ಮುಗುಳುನಗೆ’ ಚಿತ್ರದಲ್ಲಿ ಗಣೇಶ್ ಅವರ ಹೊಸ ಗೆಟಪ್ ರಿವಿಲ್ ಆಗಿದೆ. ಕಣ್ಣಿಗೆ ಕನ್ನಡಕ ಹಾಕ್ಕೊಂಡು, ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಗೋಲ್ಡನ್ ಸ್ಟಾರ್ ಎಂಟ್ರಿ ಕೊಟ್ಟಿದ್ದು ಹೊಸ ಲುಕ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಗಾಳಿಪಟ ಚಿತ್ರದ ನಂತರ ಹಲವು ವರ್ಷಗಳ ನಂತರ ಗಣೇಶ್ ಮತ್ತು ಭಟ್ಟರು ಮತ್ತೆ ಒಟ್ಟಾಗಿ ಮಾಡುತ್ತಿರುವ ಸಿನಿಮಾ ‘ಮುಗುಳುನಗೆ’. ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ‘ಸಿದ್ಧಾರ್ಥ್’ ಖ್ಯಾತಿಯ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ನಾಯಕಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದರು, ಆದ್ರೆ, ಅಮೂಲ್ಯ ಮದುವೆಯ ತಯಾರಿಯಲ್ಲಿರುವುದ್ರಿಂದ ಆ ಜಾಗಕ್ಕೆ ಹೊಸ ನಾಯಕಿಯ ಎಂಟ್ರಿ ಆಗಿದೆ. ಹೀಗಾಗಿ, ಅಮೂಲ್ಯ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರಂತೆ.