ಕನ್ನಡ ಚಿತ್ರ ನಿರ್ಮಾಪಕ ನವೀನ್ ಜೊತೆ ನಟಿ ಭಾವನಾ ನಿಶ್ಚಿತಾರ್ಥ

0
1165
Kannada actress Bhavana engaged with the film producer Navin

ಕೊಚ್ಚಿ, ಮಾರ್ಚ್ 10 (www.justkannada.in): ಬಹುಭಾಷಾ ನಟಿ ಭಾವನಾ ಅವರು ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಅವರೊಂದಿಗೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೆಚ್ಚು ಪ್ರಚಾರವಿಲ್ಲದೆ ನಡೆದ ಸರಳ ಸಮಾರಂಭದಲ್ಲಿ ನವೀನ್‌ ಮತ್ತು ಭಾವನಾ ಅವರ ಸಂಬಂಧಿಕರು, ಗೆಳೆಯರು ಹಾಜರಿದ್ದರು. ಭಾವನಾ ನಟನೆಯ ಹನಿ ಬಿ 2 ಮತ್ತು ಅಡ್ವೆಂಚರ್‌ ಆಫ್‌ ಒಮನ್‌ಕುಟ್ಟನ್‌ ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.

ನವೀನ್ ಅವರೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದ ಭಾವನಾ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. 2012ರಲ್ಲಿ ರೊಮಿಯೊ ಎಂಬ ಕನ್ನಡ ಚಿತ್ರದ ಶೂಟಿಂಗ್‌ ಸಮಯದಲ್ಲಿ ಯುವ ನಿರ್ಮಾಪಕ ನವೀನ್‌ ಅವರನ್ನು ಭಾವನಾ ಮೊದಲ ಬಾರಿ ಭೇಟಿಯಾಗಿದ್ದರು.

key words: actress Bhavana- engaged – film producer -Navin