4 ತಿಂಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡರೆ ನೀವು ಕೇಳಿದಲ್ಲಿಗೆ ವರ್ಗಾವಣೆ ಅವಕಾಶ: ಚಿಕ್ಕಮಗಳೂರು ಪೊಲೀಸರಿಗೆ ಎಸ್ ಪಿ ಯಿಂದ ಹೊಸ್ ಆಫರ್

0
69

k annamalaiಬೆಂಗಳೂರು:ಜ-12:(www.justkannada.in)ಪೊಲೀಸ್ ಕಾನ್ಸ್ ಟೇಬಲ್ ಗಳು 4 ತಿಂಗಳಲ್ಲಿ 5 ಕೆ.ಜಿ ತೂಕ ಇಳಿಸಿಕೊಂಡಲ್ಲಿ ನೀವು ಕೇಳಿದಲ್ಲಿಗೆ ವರ್ಗಾವಣೆ ಮಾಡಿಕೊಡಲಾಗುತ್ತದೆ. ಹೀಗಂತ ವಿಶೇಷವಾದ ಆಫರ್ ಒಂದನ್ನು ಚಿಕ್ಕಮಗಳೂರು ಪೊಲೀಸರಿಗೆ ಎಸ್. ಪಿ ಅಣ್ಣಾಮಲೈ ನೀಡಿದ್ದಾರೆ. ಹೀಗೂ ಉಂಟೇ..? ಎಂದು ಅಚ್ಛರಿನಾ..? ಖಂಡಿತಾ ನಿಜ.

4 ತಿಂಗಳಲ್ಲಿ 5 ಕೇಜಿ ತೂಕ ಇಳಿಸಿಕೊಂಡಲ್ಲಿ ನೀವು ಕೇಳಿದಲ್ಲಿಗೆ ವರ್ಗಾವಣೆ ಮಾಡಿಕೊಡಲಾಗುವುದು. ಎಂದು ಪೊಲೀಸರಿಗೆ ಎಸ್ ಪಿ ಅಣ್ಣಾಮಲೈ ತಿಳಿಸಿದ್ದಾರೆ. ಇತರರಿಗೆ ಪೊಲೀಸರು ಮಾದರಿಯಾಗಿರಬೇಕು. ಸೇವೆಗೆ ಸೇರಿದಾಗಿನಿಂದ ನಿವೃತ್ತಿಯಾಗುವವರೆಗೂ ದೇಹದಾಡ್ಯತೆಯನ್ನು ಒಂದೇ ಸಮನಾಗಿ ಇಟ್ಟುಕೊಳ್ಳಬೇಕು. ಇದು ಸ್ವಲ್ಪ ಕಷ್ಟವಾದರೂ ಇದನ್ನು ಪೊಲೀಸರು ಪಾಲಿಸಬೇಕು..

ಈಗಿನ ತೂಕವನ್ನು 4 ತಿಂಗಳಲ್ಲಿ 5 ಕೇಜಿ ಇಳಿಸಿಕೊಳ್ಳಬೇಕು. ಅಂತಹ ಪೊಲೀಸರಿಗೆ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಸಾಮೂಹಿಕ ವರ್ಗಾವಣೆ ಸಂದರ್ಭದಲ್ಲಿ ಅವರು ಕೇಳಿದ ಜಾಗಕ್ಕೆ ವರ್ಗಾವಣೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಕ್ರೀಡಾಕೂಟದಲ್ಲಿ ಮಾತನಾಡಿದ ಎಸ್ ಪಿ ಅಣ್ಣಾಮಲೈ, ಚಿಕ್ಕಮಗಳೂರಿನ ಪೊಲೀಸರು ನಿಜಕ್ಕೂ ಸ್ಫೋರ್ತಿದಾಯಕರು.ಪದವೀಧದರು, ಹೆಚ್ಚಿನವರು ಉನ್ನತ ಶಿಕ್ಷಣ ಪಡೆದವರೂ ಅಗಿದ್ದಾರೆ. ಆದರೆ ಇಲ್ಲಿನ ಹೆಚ್ಚಿನ ಪೊಲೀಸರಿಗೆ ಫಿಟ್ ನೆಸ್ ಸಮಸ್ಯೆಗಳಿವೆ. ಹಾಗಾಗಿ ಪೊಲೀಸ್ ಕಾನ್ಸ್ ಸ್ಟೇಬಲ್ ಗಳಿಗೆ ಫಿಟ್ ನೆಸ್ ತುಂಬಾ ಪ್ರಮುಖವಾಗಿದ್ದು, ಇದು ಪೊಲೀಸರನ್ನು ಹೆಚ್ಚು ಮಾನಸಿಕವಾಗಿ ಸಧೃಢವನ್ನಾಗಿ, ಆರೋಗ್ಯವಂತರನ್ನಾಗಿ ಮಾಡಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಪೊಲೀಸರಿಗೆ ಒಂದು ಅವಕಾಶ ನೀಡಲಾಗಿದ್ದು, ಯಾರು ನಾಲ್ಕು ತಿಂಗಳಲ್ಲಿ ತೂಕ ಇಳಿಸಿಕೊಳ್ಳುತ್ತಾರೋ ಅಂತಹ ಪೊಲೀಸರಿಗೆ ಮುಂದಿನ ವರ್ಗಾವಣೆ ವೇಳೆ ಹೆಚ್ಚಿನ ಆದ್ಯತೆ ನೀಡಲಾಗುವುದಲ್ಲದೇ. ಅವರು ಕೇಳಿದ ಸ್ಥಳಗಳಿಗೆ ವರ್ಗಾವಣೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಉಡುಪಿಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆಯೂ ಅಲ್ಲಿನ ಪೊಲೀಸರಿಗೆ ಇದೇ ಸವಾಲನ್ನು ನೀಡಿದ್ದೆ. ಅಲ್ಲಿನ ಹೆಚ್ಚಿನ ಪೊಲೀಸರು ಫಿಟ್ ನೆಸ್ ಬಗ್ಗೆ ಗಮನ ಹರಿಸಿ ತೂಕು ಇಳಿಸಿಕೊಂಡಿದ್ದರಿಂದ ಅವರಿಗೆ ಹಲವು ಅನುಕೂಲಗಳಾದವು ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಒಟ್ಟಿನಲ್ಲಿ ಎಸ್ ಪಿ ಹೇಳಿರುವ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಒಂದೆಡೆ ಸಂತೋಷವಾಗಿದ್ದರೂ ಒಂದೇ ಸಮನೆ ತೂಕವನ್ನು ಇಳಿಸಿಕೊಳ್ಳುವುದಾದರೂ ಹೇಗೆ ಎಂಬ ಯೋಚನೆಯಲ್ಲಿದ್ದಾರೆ.

K Annamalai,Chikkama­galuru,Superintendent of police,Fitness Offer