ಏಪ್ರಿಲ್ 22ರಿಂದ ಮೂರು ದಿನಗಳ ಕಾಲ ಎಸ್ ಜೆಸಿಇ ಕಾಲೇಜಿನಲ್ಲಿ ವಾರ್ಷಿಕ ಹಬ್ಬ ಜೇಸಿಯಾನದ ರಂಗು; ನಡೆಯಲಿವೆ ಸಾಂಸ್ಕೃತಿಕ ಕಾರ್ಯಕ್ರಮ…

0
359

ಮೈಸೂರು,ಏ,21,2017(www.justkannada.in): ಮೈಸೂರಿನ ಶ್ರೀ ಜಯಚಾಮರಾಜೇಂದ್ರ  ಇಂಜಿನಿಯರಿಂಗ್ ಕಾಲೇಜಿನ  ವಾರ್ಷಿಕ ಹಬ್ಬ ಜೇಸಿಯಾನ2017  ಏಪ್ರಿಲ್ 22, 23,ಹಾಗೂ 24 ರಂದು ಮೂರು ದಿನಗಳ ಕಾಲ ನಡೆಯಲಿದೆ. jayciana- celebrates - annual festival - SJCE College - three days

ಈ ವಾರ್ಷಿಕ ಹಬ್ಬವನ್ನ ಕನ್ನಡ ಚಿತ್ರರಂಗದ ನಟ ಚಾಲೇಂಜಿಂಗ್ ಸ್ಠಾರ್ ದರ್ಶನ ಉದ್ಘಾಟನೆ ಮಾಡಲಿದ್ದಾರೆ. ಈ ಸಾಂಸ್ಕೃತಿಕ ಹಬ್ಬದ ಅಂಗವಾಗಿ 40ಕ್ಕೂ ಹೆಚ್ಚು ಸ್ಪರ್ಧೆಗಳನ್ನ ಆಯೋಜಿಸಲಾಗಿದ್ದು,ಒಳಾಂಗಣ ಹೊರಾಂಗಣ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಛಾಯಾಗ್ರಹಣ, ಆನ್ ಲೈನ್ ಸ್ಪರ್ಧೆಗಳೂ ಸೇರಿವೆ.

22 ಮತ್ತು 23ರಂದು  ಸೈಕ್ಲಥಾನ್ ಮತ್ತು ಮ್ಯಾರಥಾನ್ ಆಯೋಜಿಸಲಾಗಿದೆ. ಈ ನಡುವೆ ನಿನಾದ ಎಂಬ ಸಂಗೀತ ಸ್ಪರ್ಧೆ ಮೂರು ದಿನಗಳ ಕಾಲ ನಡೆಯಲಿದ್ದು, 22 ರಂದು  ವಾದ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ 24 ರಂದು ಸಿನಿಮಾ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ಈ ಮೂರು ದಿನದ ಕಾರ್ಯಕ್ರಮದಲ್ಲಿ ಮೂಲೆ ಮೂಲೆಗಳಿಂದ ಕಲಾವಿದರು ಆಗಮಿಸಲಿದ್ದು, ಬಾಲಿವುಡ್ ಗಾಯಕಿ  ಶಿಫಾಲಿ ಅಲ್ವರಸ್ ಸಂಗೀತ ಕಾರ್ಯಕ್ರಮವಿದೆ. ಹಾಗೆಯೇ  23ರಂದು ನಮ್ಮ ಮೈಸೂರಿನ ಜೈಹೋ ಖ್ಯಾತಿಯ  ವಿಜಯ್ ಪ್ರಕಾಶ್  ಹಾಗೂ ಅವರ ತಂಡದ ಗಾನಸುಧೆ ಇದೆ. 24 ರಂದು ವಿಶ್ವವಿಖ್ಯಾತ ರೊಮೇನಿಯನ್ ಸಂಗೀತಗಾರ ಎಡ್ವರ್ಡ್ ಮಾಯ ಅವರ ಸಂಗೀತ ಕಾರ್ಯಕ್ರಮವಿದೆ.

Key words: jayciana- celebrates – annual festival – SJCE College – three days