ನವದೆಹಲಿ,ಜ,12,2017(www.justkannada.in): ಜಲ್ಲಿಕಟ್ಟು ಕ್ರೀಡೆಗೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಿ ಕ್ರೀಡೆ ನಡೆಸಲು ಅವಕಾಶ ನೀಡಬೇಕು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. jallikattu Sport -appeal -Tamil Nadu government -restrictions

ಪೊಂಗಲ್ ಹಬ್ಬ ಆರಂಭಕ್ಕೂ ಮುನ್ನ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಗೆ ತಮಿಳುನಾಡು ಸರ್ಕಾರ ಮನವಿ ಸಲ್ಲಿಸಿತ್ತು.

ಆದರೆ ಅರ್ಜಿಯನ್ನ ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಮಧ್ಯಾಂತರ ಆದೇಶ ನೀಡಲು ನಿರಾಕರಿಸಿದೆ.ತೀರ್ಪಿನ  ವಿಚಾರದಲ್ಲಿ ಕೋರ್ಟ್ ಮೇಲೆ ಒತ್ತಡ ತರುವುದು ಸರಿಯಲ್ಲ ಯಾವಾಗ ತೀರ್ಪು ನೀಡಿಬೇಕು ಎಂಬುದು ಕೋರ್ಟ್ ಗೆ ಗೊತ್ತಿದೆ ಎಂದು ತಿಳಿಸಿದೆ.

ಈ ಸಂಬಂಧ ತಮಿಳುನಾಡು ಸರ್ಕಾರ ಪ್ರಧಾಣಿ ನರೇಂದ್ರ ಮೋದಿಗೆ ಪತ್ರ ಬರೆದು ಈ ಕುರಿತು ನೂತನ ಕಾಯ್ದೆ ರೂಪಿಸಬೇಕು ಎಂದು ಮನವಿ ಮಾಡಿದೆ. ಜಲ್ಲಿಕಟ್ಟು ಕ್ರೀಡೆ ಆಚರಿಸಲು ಅವಕಾಶ ಮಾಡಿಕೊಡದಿರುವ ಸುಪ್ರೀಂಕೋರ್ಟ್ ವಿರುದ್ದ ಡಿಎಂಕೆ ತಮಿಳುನಾಡಿನಲ್ಲಿ ನಾಳೆ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.

Key words: jallikattu Sport -appeal -Tamil Nadu government -restrictions